ಕೊಪ್ಪಲಂಗಡಿ ಬಳಿ ಡಿವೈಡರಿಗೆ ಡಿಕ್ಕಿಯೊಡೆದು ಉರುಳಿಬಿದ್ದ ಕಾರು: ಮಣಿಪಾಲದ 4 ಮಂದಿ ಎಂಐಟಿ ವಿದ್ಯಾರ್ಥಿಗಳಿಗೆ ಗಾಯ: ಗಾಯಗೊಂಡವರನ್ನು ರಕ್ಷಿಸಿ ಮಾನವೀಯತೆ ಮೆರೆದ ಉಚ್ಚಿಲದ ಜಲ್ಲು ತಂಡ

ಕೊಪ್ಪಲಂಗಡಿ ಬಳಿ ಡಿವೈಡರಿಗೆ ಡಿಕ್ಕಿಯೊಡೆದು ಉರುಳಿಬಿದ್ದ ಕಾರು: ಮಣಿಪಾಲದ 4 ಮಂದಿ ಎಂಐಟಿ ವಿದ್ಯಾರ್ಥಿಗಳಿಗೆ ಗಾಯ: ಗಾಯಗೊಂಡವರನ್ನು ರಕ್ಷಿಸಿ ಮಾನವೀಯತೆ ಮೆರೆದ ಉಚ್ಚಿಲದ ಜಲ್ಲು ತಂಡ

 

ಕಾಪು: ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಮಣಿಪಾಲದ ವಿದ್ಯಾರ್ಥಿಗಳಿದ್ದ ಕಾರೊಂದು ಡಿವೈಡರಿಗೆ ಡಿಕ್ಕಿಯೊಡೆದು ಉರುಳಿಬಿದ್ದಿದ್ದು, ನಾಲ್ಕು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.





ಇಂದು ಬೆಳಗ್ಗೆ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳಿದ್ದ ಕಾರು ಮಣಿಪಾಲದಿಂದ ಮಂಗಳೂರು ಕಡೆ ಹೋಗುತ್ತಿದ್ದ ವೇಳೆ ಕೊಪ್ಪಲಂಗಡಿ ಬಳಿ ಡಿವೈಡರಿಗೆ ಕಾರು ಡಿಕ್ಕಿಯೊಡೆದಿದೆ. ಈ ವೇಳೆ ಉರುಳಿಬಿದ್ದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ 4 ಮಂದಿ ವಿದ್ಯಾರ್ಥಿಗಳ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ಓರ್ವ ಇಂದ್ರಾಳಿಯವನಾಗಿದ್ದು, ಉಳಿದಂತೆ ಮೂವರು ದೆಹಲಿ ಹಾಗು ಇನ್ನಿತರ ರಾಜ್ಯದವರಾಗಿದ್ದಾರೆ ಎಂದು ಕಾಪು ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ 'ಹೆಡ್ಲೈನ್ಸ್ ಕನ್ನಡ'ಕ್ಕೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಉಚ್ಚಿಲದ ಯುವಕರು

ಬೆಳಗ್ಗೆ ಸುಮಾರು 6.30ರ ವೇಳೆಗೆ ಈ ಅಪಘಾತ ಸಂಭವಿಸಿದ್ದು, ಕೂಡಲೇ ರಕ್ಷಣೆಗೆ ಧಾವಿಸಿದ ಉಚ್ಚಿಲದ ಜಲ್ಲು(ಜಲಾಲುದ್ದೀನ್), ಉಚ್ಚಿಲದ ಎಸ್ಡಿಪಿಐ ಅಂಬ್ಯುಲೆನ್ಸ್ ಚಾಲಕ ಸಿರಾಜ್ ಎರ್ಮಾಳ್, ಮೂಳೂರಿನ ಎಸ್ಡಿಪಿಐ ಅಂಬ್ಯುಲೆನ್ಸ್ ಚಾಲಕ ನವಾಜ್ ಸೇರಿದಂತೆ ಯುವಕರ ತಂಡ ಗಾಯಗೊಂಡವರನ್ನು ರಕ್ಷಣೆ ಮಾಡಿದ್ದು, ಅಂಬ್ಯುಲೆನ್ಸ್  ಮೂಲಕ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಚ್ಚಿಲದ ಜಲ್ಲು(ಜಲಾಲುದ್ದೀನ್), ಸಿರಾಜ್ ಎರ್ಮಾಳ್, ಮೂಳೂರಿನ ನವಾಜ್ ಅವರು ಉಚ್ಚಿಲ ಸುತ್ತಮುತ್ತ ನಡೆಯುವ ಅಪಘಾತದ ವೇಳೆ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡವರ ರಕ್ಷಣೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರ ಈ ಮಹಾತ್ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article