ಪಾದೂರು: ಮರದ ಹುಡಿ ಸಂಗ್ರಹಿಸಿಟ್ಟಿದ್ದ ಗೋಡೌನ್ ನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ದುರಂತ
Thursday, May 30, 2024
ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮರದ ಹುಡಿಯನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ ಗೆ ಬೆಂಕಿ ತಗುಲಿದೆ. ಹೊಗೆ ಮತ್ತು ಬೆಂಕಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಯಿತು. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಉಡುಪಿಯಿಂದ ತೆರಳಿದ ಅಗ್ನಿಶಾಮಕ ದಳದವರು ತಕ್ಷಣವೇ ಅಗ್ನಿ ನಂದಿಸಿದರು. ಮರದ ಹುಡಿಗೆ ಬೇಗ ಬೆಂಕಿ ಹಿಡಿಯುವುದರಿಂದ ಅಪಾಯ ಹೆಚ್ಚಿತ್ತು. ಸಕಾಲಿಕ ಕಾರ್ಯಚರಣೆಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.