ನೀಲಾವರ ಗೋಶಾಲೆಗೆ 3 ಸಾವಿರ ಕೆಜಿ ಕಲ್ಲಂಗಡಿ ಹಣ್ಣು ಸಮರ್ಪಿಸಿದ ಯುವಕರ ತಂಡ; ಗೋವುಗಳಿಗೆ ಕಲ್ಲಂಗಡಿ ಹಣ್ಣು ತಿನ್ನಿಸಿ ಸಂಭ್ರಮಿಸಿದ ಯುವಕರು
Wednesday, May 1, 2024
ಉಡುಪಿ: ನೀಲಾವರ ಗೋಶಾಲೆಯ ಸಾವಿರಾರು ಗೋವುಗಳಿಗೆ ಯುವಕರ ತಂಡವೊಂದು 3 ಸಾವಿರ ಕೆಜಿ ಕಲ್ಲಂಗಡಿ ತಿನ್ನಿಸಿ ಖುಷಿ ಪಟ್ಟಿದೆ.
ಬಿಸಿಲ ಧಗೆ ಪ್ರತಿದಿನ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹಸುಗಳು ಸಹಜವಾಗಿಯೇ ಸಂಕಟ ಪಡುತ್ತವೆ. ಹಾಗಾಗಿ ಉಡುಪಿಯ ರಘುನಂದನ್ ಹೆಬ್ಬಾರ್ ನೇತೃತ್ವದ ಯುಗಾದಿ ಗೋಪಾರ್ಟಿ ತಂಡದವರು, ಕಲ್ಲಂಗಡಿ ತಿನ್ನಿಸುವ ಮಹತ್ವದ ನಿರ್ಧಾರ ಕೈಗೊಂಡರು. ಕಾರ್ಯಕರ್ತರಲ್ಲಾ ಸೇರಿ ಗೋ ಶಾಲೆಗೆ ಭೇಟಿ ಕೊಟ್ಟು ಕಲ್ಲಂಗಡಿಯನ್ನು ತುಂಡು ಮಾಡಿ ತಾವೇ ಸ್ವತಃ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು.
ಈ ತಂಡ ಗೋ ಸೇವೆಯಲ್ಲಿ ನಿರತವಾಗಿದ್ದು ಪ್ರತಿ ವರ್ಷ ವಿವಿಧ ಗೋಶಾಲೆಗಳಿಗೆ ಭೇಟಿ ನೀಡಿ ಈ ರೀತಿ ಗೋಸೇವೆ ನಡೆಸುತ್ತಾ ಬಂದಿದೆ. ನೀಲಾವರ ಗೋಶಾಲೆಯು ಸೇರಿದಂತೆ ಕರಾವಳಿ ಪರಿಸರದ ಅನೇಕ ಗೋಶಾಲೆಗಳಲ್ಲಿ ಸೇವಾ ಕಾರ್ಯ ನಡೆಸಿದೆ. ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಪುಟ್ಟ ಭಾಗವನ್ನು ತಮ್ಮ ಊರಿನ ಗೋವುಗಳ ಸೇವೆಗೆ ಬಳಸಬೇಕು ಎಂಬುವುದು ಈ ತಂಡದ ಆಶಯವಾಗಿದೆ.