ಉಡುಪಿಯ ಸುಶ್ಮಿತಾ ಆಚಾರ್ಯಗೆ ಮಿಸ್ ಕೋಸ್ಟಲ್ - 2024 ಕಿರೀಟ
Saturday, June 22, 2024
ಉಡುಪಿ: ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್ - 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಭಾವಂತೆಯಾಗಿರುವ ಸುಶ್ಮಿತಾ ಆಚಾರ್ಯ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಈ ಮೊದಲು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದಾರೆ. 'ಸುಜಾಸ್ 'ನ ಜಯಲಕ್ಷ್ಮೀ ಇವರಿಗೆ ಮಾರ್ಗದರ್ಶನ ಮಾಡಿದ್ದರು. ಇವರು ಮುಲ್ಕಿಯ ಕೆ.ಸತೀಶ್ ಆಚಾರ್ಯ ಹಾಗೂ ಸ್ವಾತಿ ಆಚಾರ್ಯ ದಂಪತಿ ಪುತ್ರಿ.