ಉಡುಪಿಯಲ್ಲಿ ವ್ಯಾಪಕ ಮಳೆ; ಬೈಲಕೆರೆಯಲ್ಲಿ ಮಳೆಯೊಳಗೆ ನುಗ್ಗಿದ ನೀರು; ನೆರೆ ಬಾದಿತ ನಿವಾಸಿಗಳ ಸ್ಥಳಾಂತರ; 14 ಮಂದಿಯ ರಕ್ಷಣೆ

ಉಡುಪಿಯಲ್ಲಿ ವ್ಯಾಪಕ ಮಳೆ; ಬೈಲಕೆರೆಯಲ್ಲಿ ಮಳೆಯೊಳಗೆ ನುಗ್ಗಿದ ನೀರು; ನೆರೆ ಬಾದಿತ ನಿವಾಸಿಗಳ ಸ್ಥಳಾಂತರ; 14 ಮಂದಿಯ ರಕ್ಷಣೆ

ಉಡುಪಿ: ಸತತ ಎರಡು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಉಡುಪಿಯ ಕೆಲವು ತಗ್ಗುಪ್ರದೇಶಗಳಲ್ಲಿ‌ ಕೃತಕ ನೆರೆ ಸೃಷ್ಟಿಯಾಗಿದೆ.


ಉಡುಪಿ ಕೃಷ್ಣಮಠದ ಪಾರ್ಕಿಂಗ್ ಸ್ಥಳದ ಸಮೀಪ ಬೈಲಕೆರೆ ಸುತ್ತಮುತ್ತಲಿನಲ್ಲಿ ನೆರೆಯ ಪ್ರಮಾಣ ಹೆಚ್ಚಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯವರನ್ನು ಸ್ಥಳಾಂತರಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರನ್ನು ರಕ್ಷಿಸಿದ್ದಾರೆ. ನಾಲ್ಕು ಮನೆಯಲ್ಲಿದ್ದ ಒಟ್ಟು 14 ಮಂದಿಯ ರಕ್ಷಣೆ ಮಾಡಲಾಗಿದೆ. ಅವರಿಗೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಉಳಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article