ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪದ ರಕ್ಷಣೆ! ವೀಡಿಯೊ ಸಖತ್ ವೈರಲ್

ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪದ ರಕ್ಷಣೆ! ವೀಡಿಯೊ ಸಖತ್ ವೈರಲ್

ಆಗುಂಬೆ: ಈ ಜಗತ್ತಿನ ಅತಿ ಉದ್ದವಾದ ಹಾಗೂ ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ಕಾಳಿಂಗ ಸರ್ಪವನ್ನು ಜನ ಕಂಡರೆ ಭಯಭೀತರಾಗುದು ಖಚಿತ. ಅಂಥವೊಂದು ಕಾಳಿಂಗ ಸರ್ಪ ಆಗುಂಬೆಯಲ್ಲಿ ಕಾಣಿಸಿಕೊಂಡಿದೆ. 

ಇಲ್ಲೊಂದು 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಜನ ವಸತಿ ಪ್ರದೇಶದಲ್ಲಿ ಕಾಣಿಸಿದ್ದು, ಇದರ ರಕ್ಷಣಾ ಕಾರ್ಯದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಮಳೆಗಾಲದಲ್ಲಿ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುವುದ ಸಾಮಾನ್ಯ. ಅದೇ ರೀತಿ ಆಗುಂಬೆಯಲ್ಲಿಯೂ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ವನ್ಯಜೀವಿ ಅಧಿಕಾರಿಗಳು ಈ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ರಸ್ತೆ ದಾಟಿ ಬಂದಂತಹ ಈ ದೈತ್ಯ ಕಾಳಿಂಗ ಸರ್ಪ ಮನೆಯೊಂದರ ಕಾಂಪೌಂಡ್‌ ಏರಿ ಅಲ್ಲಿದ್ದ ಮರದ ಕೊಂಬೆಯಲ್ಲಿ ಹಾಯಾಗಿ ಕುಳಿತಿತ್ತು. ಈ ದೈತ್ಯ ಜೀವಿಯನ್ನು ಕಂಡು ಬೆಚ್ಚಿ ಬಿದ್ದ ಆ ಮನೆಯವರು ಮತ್ತು ಅಲ್ಲಿನ ಸ್ಥಳೀಯ ನಿವಾಸಿಗಳು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಎಆರ್‌ಆರ್‌ಎಸ್‌ ತಂಡ ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ಅಪಾಯಗಳು ಸಂಭವಿಸದಂತೆ ಬಹಳ ಜಾಗರೂಕತೆಯಿಂದ ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಆಗುಂಬೆ ರೈನ್‌ ಫಾರೆಸ್ಟ್‌ ಸಂಶೋಧನಾ ಕೇಂದ್ರದ ಫೀಲ್ಡ್‌ ಡೈರೆಕ್ಟರ್‌ ಅಜಯ್‌ ಗಿರಿ (ajay_v_giri) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಆಗುಂಬೆ ಸಮೀಪದ ಮನೆಯೊಂದರ ಕಾಂಪೌಂಡ್‌ ಬಳಿಯಿದ್ದ ಗಿಡವೊಂದರ ಮೇಲೆ 12 ಅಡಿ ಉದ್ದದ ಹಾವು ಹಾಯಾಗಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಎಆರ್‌ಆರ್‌ಎಸ್‌ ತಂಡ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೈತ್ಯ ಹಾವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದು ಜೊತೆಗೆ ಹಾವನ್ನು ರಕ್ಷಣೆ ಮಾಡಿದ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article