ಪ್ರಿಯಕರನನ್ನು ಮಂಚಕ್ಕೆ ಕರೆದು ಆತನ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿದ ಪ್ರಿಯತಮೆ! ಕಾರಣ ಕೇಳಿ ಶಾಕ್ ಆದ ಪೊಲೀಸರು
ಪಾಟ್ನಾ: ಬಾಯ್ಫ್ರಂಡ್ ಸಮ್ಮಿಲನಕ್ಕೆ ಬಂದ ವೇಳೆ ಗೆಳತಿ ಆತನ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಮಧೌರದ 12ನೇ ವಾರ್ಡ್‌ನ ಕೌನ್ಸಿಲರ್ ವೇದಪ್ರಕಾಶ್‌ಗೆ ಅದೇ ವಲಯದ ನರ್ಸಿಂಗ್ ಹೋಮ್ ಮಾಲಕಿ ಮೇಲೆ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರ ಪ್ರೀತಿ ಗಾಢವಾಗಿ ಬೆಳೆದಿದೆ. ಎಷ್ಟರ ಮಟ್ಟಿಗೆ ಅಂದರೆ ಇಬ್ಬರ ನಡುವೆಯೂ ದೈಹಿಕ ಸಂಪರ್ಕವೂ ಸಹ ಬೆಳೆದಿದೆ. ಇದರ ನಡುವೆ ಗೆಳತಿ ಮದ್ವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದ್ರೆ, ವೇದಪ್ರಕಾಶ್ ಆಗೋಣ ಆಗೋಣ ಎನ್ನುತ್ತಲ್ಲೇ ಮುಂದೂಡಿಕೊಂಡು ಬಂದಿದ್ದಾನೆ. ಕೊನೆಗೆ ಗೆಳತಿಯ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಮನೆಯಲ್ಲಿ ಮದುವೆ ತಯಾರಿ ಸಹ ನಡೆದಿತ್ತು. ಇನ್ನೇನು ಮದ್ವೆ ಡೇಟ್ ಸಮೀಪ ಬರುತ್ತಿದ್ದಂತೆಯೇ ಮದುವೆಯಾಗಲ್ಲ ಎಂದು ಖ್ಯಾತೆ ತೆಗೆದಿದ್ದಾನೆ. ಇದರಿಂದ ಕೋಪಗೊಂಡ ಗೆಳತಿ ನಯವಾಗಿ ಮಾತನಾಡಿ ಲೈಂಗಿಕ ಕ್ರಿಯೆ ಆಹ್ವಾನಿಸಿ ಆತನ ಮರ್ಮಾಂಗವನ್ನು ಕತ್ತರಿಸಿ ಸಿಟ್ಟು ತೀರಿಸಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರು ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಬಾಯ್‌ಫ್ರೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಗೆಳತಿ ಜೈಲು ಪಾಲಾಗಿದ್ದಾಳೆ.
ಪ್ರಕರಣ ಹಿನ್ನೆಲೆ
ಗಳೆತಿ ಮದುವೆಗೆ ಹಲವು ಬಾರಿ ಒತ್ತಾಯಿಸಿದ್ದಾಳೆ. ಈ ವೇಳೆ ಒಂದೊಂದೆ ಕಾರಣ ನೀಡಿದ ವೇದಪ್ರಕಾಶ್ ಮದುವೆಯನ್ನು ಮುಂದೂಡಿದ್ದಾನೆ. ಪ್ರೀತಿ, ಲೈಂಗಿಕ ಸಂಪರ್ಕ ಸುದೀರ್ಘ ವರ್ಷಗಳಿಂದ ಮುಂದುವರಿಯುತ್ತಾ ಬಂದಿದೆ. ಕೊನೆಗೆ ಮದುವೆ ಗೆಳತಿಯ ಒತ್ತಾಯ ಹೆಚ್ಚಾಗಿದೆ. ಹಲವು ಬಾರಿ ಒತ್ತಾಯಿಸಿದ ಕಾರಣ ಮದುವೆಗೆ ಒಪ್ಪಿಕೊಂಡಿದ್ದಾನೆ. ಇತ್ತ ತಯಾರಿಗಳು ಆರಂಭಗೊಂಡಿದೆ. ಮದುವೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಮಂಟಪ ಬುಕ್ ಮಾಡಲಾಗಿದ್ದು, ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಆದ್ರೆ, ಮದುವೆ ದಿನಾಂಕ ಹತ್ತಿರಬರುತ್ತಿದ್ದಂತೆ ನಾನು ಮದುವೆಯಾಗಲ್ಲ ಎಂದು ಹೊಸ ವರಸೆ ತೆಗೆದಿದ್ದಾನೆ. ಅಲ್ಲದೇ ನಾವು ಹೀಗೆ ಇರೋಣ, ಮದುವೆ ಯಾಕೆ ಎಂದು ಒತ್ತಾಯಿಸಿದ್ದಾನೆ.
ಇನ್ನು ವೇದಪ್ರಕಾಶ್ ಮನ ಒಲಿಸಲು ಗೆಳತಿ ಸಹ ಹಲವು ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಮಾತ್ರ ಮದುವೆ ಯಾಕೆ, ಹೀಗೆ ಇದ್ದರೆ ಒಕೆ ಎನ್ನುತ್ತಲೇ ಬಂದಿದ್ದಾನೆ. ಅಲ್ಲದೇ ಫಿಕ್ಸ್ ಆಗಿರುವ ಮದುವೆಯನ್ನು ರದ್ದು ಮಾಡುವಂತೆ ಫೋನ್ ಮಾಡಿ ಹೇಳಿದ್ದಾನೆ. ಇದರಿಂದ ಕೋಪಗಗೊಂಡ ಗೆಳತಿ, ಫೋನ್‌ನಲ್ಲಿ ಬೇಡ, ಮುಖಾಮುಖಿಯಾಗಿ ಭೇಟಿ ಮಾತನಾಡೋಣ ಬಾ ಎಂದು ಕರೆದಿದ್ದಾಳೆ. ಅಲ್ಲದೇ ಭೇಟಿಯಾದ ಮೊದಲು ನಾವು ಎಂದಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗೋಣ, ಬಳಿಕ ಮದುವೆ ಕುರಿತು ಮಾತನಾಡೋಣ ಎಂದಿದ್ದಾಳೆ.
ಇದರಿಂದ ಫುಲ್ ಖುಷಿ ಖುಷಿಯಿಂದ ಬಂದು ಗೆಳತಿಯೊಂದಿಗೆ ಸಮ್ಮಿಲನಕ್ಕೆ ಮುಂದಾಗಿದ್ದಾನೆ. ಮೊದಲೇ ಆಕ್ರೋಶಗೊಂಡಿದ್ದ ಗೆಳತಿ, ವೇದಪ್ರಕಾಶ್ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲಟ್ ಹಾಕಿ ಫ್ಲಶ್ ಮಾಡಿದ್ದಾಳೆ. ಇತ್ತ ಚೀರಾಡುತ್ತಾ ಪೊಲೀಸರಿಗೆ ಫೋನ್ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವೇದಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಆತನ ಮರ್ಮಾಂಗ ಕತ್ತರಿಸಿದ್ದಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಆತ ಇನ್ನೆಂದು ದೈಹಿಕ ಸಂಪರ್ಕ ಮಾಡಬಾರದು. ಪ್ರೀತಿ ನಾಟಕವಾಡಿ ದೈಹಿಕ ಸಂಪರ್ಕಕ್ಕೆ ಮಾತ್ರ ಒಕೆ ಎನ್ನುವ ಈತ ದೊಡ್ಡ ಪಾಪಿ ಎಂದಿದ್ದಾಳೆ. ಈ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.