
ದುಬೈಯಲ್ಲಿ ನಡೆದ ಕೆಸಿಲ್ ಸೀಸನ್ 1; ಟ್ರೋಫಿ ಮುಡಿಗೇರಿಸಿಕೊಂಡ ವಿದ್ವಾರ್ ಬಾಯ್ಸ್ ಮಂಗಳೂರು ಮೇಜಿಷಿಯನ್ಸ್: ಟೀಮ್ ಎಲೆಗೆಂಟ್ ಮೂಡಬಿದ್ರಿ ಚಾಂಪಿಯನ್ಸ್ ರನ್ನರ್
Tuesday, October 29, 2024
ದುಬೈ: ಯುಎಇನ ಹಿಲಿಯೋ ಕ್ರಿಕೆಟ್ ಮೈದಾನದಲ್ಲಿ ಡೂ ವೆಲ್ತ್ ಅರ್ಪಿಸಿದ ಹಾಗೂ ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್ 1 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಕ್ರಿಕೆಟ್ ಲೀಗ್ ನಲ್ಲಿ ವಿದ್ವಾರ್ ಬಾಯ್ಸ್ ಮಂಗಳೂರು ಮೇಜಿಷಿಯನ್ಸ್ ತಂಡವು ಟ್ರೋಫಿ ಅನ್ನು ಮೂಡಿಗೇರಿಸಿಕೊಂಡಿದೆ.
ಟೀಮ್ ಎಲೆಗೆಂಟ್ ಮೂಡಬಿದ್ರಿ ಚಾಂಪಿಯನ್ಸ್ ತಂಡವು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಈ ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಭಾಗದ 16 ತಂಡಗಳು ಭಾಗವಹಿಸಿ ಹಾಗೂ ಎಲ್ಲ ತಂಡಗಳಲ್ಲಿ ಕರ್ನಾಟಕ ಆಟಗಾರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಟೂರ್ನಿಯ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಫಾರ್ಚುನ ಗ್ರೂಪಿನ ಮಾಲಿಕರಾದ ಪ್ರವೀಣ ಶೆಟ್ಟಿ ಮತ್ತು ಬು ಅಬ್ದುಲ್ಲಾ ಗ್ರೂಪಿನ ಅಧ್ಯಕ್ಷರಾದ ಬು ಅಬ್ದುಲ್ಲಾ ಮತ್ತು ಹಲವಾರು ಗಣ್ಯ ಅತಿಥಿಗಳು ಹಾಜರಿದ್ದರು.
ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡಗಳು ಆಯೋಜಕರಾದ ಗಲ್ಫ್ ಕರ್ನಾಟಕ ಕುಟುಂಬ ತಂಡದ ಸಮಯಪ್ರಜ್ಞೆ ಮತ್ತು ಸಂಘಟನಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.