ತನ್ನ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ ಕಳುಹಿಸಿದ್ದ ಅಪ್ರಾಪ್ತ ಬಾಲಕನ ಬಂಧನ

ತನ್ನ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ ಕಳುಹಿಸಿದ್ದ ಅಪ್ರಾಪ್ತ ಬಾಲಕನ ಬಂಧನ

ಮುಂಬೈ: ತನ್ನ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಅಪ್ರಾಪ್ತನನ್ನ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತನ ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾ ನಕಲಿ ಖಾತೆ ತೆರೆದು, ಇದೇ ಅಕ್ಟೋಬರ್‌ 14ರಂದು ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ ಕಳುಹಿಸಿದ್ದಕ್ಕಾಗಿ ಅಪ್ರಾಪ್ತನನ್ನ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಬಂಧಿತ ಅಪ್ರಾಪ್ತನು ತನ್ನ ಸ್ನೇಹಿತನೊಂದಿಗೆ ಹಣದ ವಿಚಾರಕ್ಕೆ ಜಗಳವಾಡಿಕೊಂಡಿದ್ದ. ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ನಕಲಿ ಎಕ್ಸ್‌ ಖಾತೆಯೊಂದನ್ನ ತೆರೆದು, ಅದರಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 

ಕಳೆದ ಮೂರು ದಿನಗಳಲ್ಲಿ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದ 12 ಪ್ರಕರಣಗಳು ಕಂಡುಬಂದಿವೆ. ಆದ್ರೆ ವಿಮಾನಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಬುಧವಾರ (ಇಂದು) ಸಹ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ ವಿಮಾನ QP1335 ಹಾಗೂ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ (ವಿಮಾನ ಸಂಖ್ಯೆ 6E 651) ಬಾಂಬ್‌ ಬೆದರಿಕೆ ಹಾಕಿರುವ ಪ್ರಕರಣಗಳು ಕಂಡುಬಂದಿವೆ.

ತುರ್ತು ಸಭೆ: ವಿಮಾನಗಳಿಗೆ ಬಾಂಬ್‌ ಬೆದರಿಕೆ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂಸದೀಯ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. 

ಡಾರ್ಕ್‌ವೆಬ್‌ ಮೇಲೆ ನಿಗಾ:ಬಾಂಬ್‌ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಗುರುತಿಸಲಾಗಿದ್ದು, ಡಾರ್ಕ್ ವೆಬ್‌ನ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Ads on article

Advertise in articles 1

advertising articles 2

Advertise under the article