ಗ್ರಾಹಕರಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್'ನಲ್ಲಿ ಸಿಹಿಸುದ್ದಿ! ಅ.9ರಂದು ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ಗಳನ್ನೊಳಗೊಂಡ ನವೀಕೃತ ಪುರುಷರ ವಿಭಾಗದ ಉದ್ಘಾಟನೆ; ಗ್ರಾಹಕರಿಂದಲೇ ಉದ್ಘಾಟನೆ

ಗ್ರಾಹಕರಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್'ನಲ್ಲಿ ಸಿಹಿಸುದ್ದಿ! ಅ.9ರಂದು ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ಗಳನ್ನೊಳಗೊಂಡ ನವೀಕೃತ ಪುರುಷರ ವಿಭಾಗದ ಉದ್ಘಾಟನೆ; ಗ್ರಾಹಕರಿಂದಲೇ ಉದ್ಘಾಟನೆ

ಉಡುಪಿ: ಕರಾವಳಿ ಕರ್ನಾಟಕ ಅತೀ ವಿಶಾಲವಾದ ಮಳಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್'ನಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ಗಳನ್ನೊಳಗೊಂಡ ನವೀಕೃತ ಪುರುಷರ ವಿಭಾಗದ ಉದ್ಘಾಟನೆಯು ಅ.9ರಂದು ಬೆಳಗ್ಗೆ 9.45ಕ್ಕೆ ನಡೆಯಲಿದೆ ಎಂದು ಗೀತಾಂಜಲಿ ಸಿಲ್ಕ್ಸ್ ಪಾಲುದಾರ ಸಂತೋಷ್ ವಾಗ್ಳೆ ತಿಳಿಸಿದ್ದಾರೆ.

ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಪುರುಷರ ಎಲ್ಲ ಪ್ರಮುಖ ಬ್ರಾಂಡ್ಗಳು, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾದ ಅತ್ಯಾಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್ವೇರ್, ಕ್ಯಾಶುವಲ್ ವೇರ್, ಗ್ರಾಹಕರ ಅಭಿರುಚಿಗಳಿಗೆ ಅನುಸಾರ ವಾಗಿ ಸೂಟಿಂಗ್- ಶರ್ಟಿಂಗ್ ಹಾಗೂ ಒಳ ಉಡುಪಗಳನ್ನು ಒಳಗೊಂಡ ಅತೀ ವಿಶಾಲವಾದ ವಿಭಾಗವನ್ನು ಆರಂಭಿಸಲಾಗಿದೆ ಎಂದರು.

ಗ್ರಾಹಕರೇ ನಮ್ಮ ದೇವರು ಎಂಬ ಪರಿಕಲ್ಪನೆಯೊಂದಿಗೆ ಈ ವಿಭಾಗವನ್ನು ಗ್ರಾಹಕರಿಂದಲೇ ಉದ್ಘಾಟಿಸಲಾಗುವುದು. ಈ ಪುರುಷರ ವಿಭಾಗದಲ್ಲಿ ಸುಮಾರು 22 ಬ್ರಾಂಡ್ಗಳಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರತಿ ಬ್ರಾಂಡ್ಗಳ ಪ್ರತ್ಯೇಕ ಪ್ರತ್ಯೇಕ ವಿಭಾಗವನ್ನು ಇಲ್ಲಿ ತೆರೆಯಲಾಗಿದೆ. 

ಗೀತಾಂಜಲಿ ಸಿಲ್ಕ್ಸ್ ಮಳಿಗೆಯು ಮೂರು ಮಹಡಿಗಳಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಪ್ರತ್ಯೇಕ ವಿಶಾಲ ವಿಭಾಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.ಉಡುಪಿಯಲ್ಲಿ ಕಳೆದ ನಾಲ್ಕು ದಶಕ ಗಳಿಂದ ಹಲವಾರು ಉದ್ಯಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಗ್ರಾಹಕರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಇದು ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ದ್ಯೋತಕವಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲುದಾರ ಸಹೋದರರಾದ ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ, ಹರೀಶ ವಾಗ್ಳೆ ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article