ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಎಲ್‌ಎಂಎಚ್ ಕ್ಯಾಂಟಿನ್ ಶುಭಾರಂಭ

ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಎಲ್‌ಎಂಎಚ್ ಕ್ಯಾಂಟಿನ್ ಶುಭಾರಂಭ

ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್(ಮಿಷನ್ ಆಸ್ಪತ್ರೆ) ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಎಲ್‌ಎಂಎಚ್ ಕ್ಯಾಂಟಿನ್(ಡಾಕ್ಟರ್ಸ್‌ ಕಿಚನ್)ನ್ನು ಸಿಎಸ್‌ಐ- ಕೆಎಸ್‌ಡಿಯ ಬಿಷಪ್ ರೆ.ಹೇಮಚಂದ್ರ ಕುಮಾರ್ ಗುರುವಾರ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಯಾವುದೇ ಕಾರ್ಯಕ್ಕೆ ದೇವರ ಆಶೀರ್ವಾದ ಇದ್ದರೆ ಮಾತ್ರ ನೆರವೇರಲು ಸಾಧ್ಯ. ಅದರೊಂದಿಗೆ ನಮ್ಮ ಶ್ರಮ ಕೂಡ ಮುಖ್ಯವಾಗುತ್ತದೆ. ಕನಸು ಕಾಣಬೇಕು. ಅದನ್ನು ಅನುಷ್ಠಾನಗೊಳಿಸಬೇಕಾದರೆ ಸಾಧಿಸುವ ಛಲ ಹಾಗೂ ದೃಢ ವಿಶ್ವಾಸ ಅಗತ್ಯ. ಸುಸಜ್ಜಿತ ಹಾಗೂ ಶುಚಿತ್ವದಿಂದ ಕೂಡಿರುವ ಈ ಕ್ಯಾಂಟಿನ್ ಉತ್ತಮ ಆಹಾರ ಒದಗಿಸಲಿ ಎಂದು ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುನೀಲ್ ಜತ್ತನ್ನ ಮಾತನಾಡಿ, ಗುಣಮಟ್ಟದ ಆಹಾರ, ಹೊಟೇಲ್ ನಡೆಸುವವರ ಅಪಾರ ಅನುಭವ, ಪಥ್ಯ ಆಹಾರ, ಶುಚಿತ್ವದ ಆದ್ಯತೆ ಮೇರೆಗೆ ಆರಂಭಿಸಲಾಗಿದೆ. ಮುಂದಿನ ನಮ್ಮ ಆಸ್ಪತ್ರೆ ಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ದೇವೇಂದ್ರ ನಾಯಕ್ ಮಾತನಾಡಿದರು. ಸಿಎಸ್‌ಐ ಕೆಎಸ್‌ಡಿ ಏರಿಯಾ ಚೈಯರ್‌ಮೆನ್ ರೆ.ಐವನ್ ಡಿ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಸುನೀಲ್ ಜತ್ತನ್ನ ಅವರನ್ನು ಸನ್ಮಾನಿಸ ಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಸ್ವಾಗತಿಸಿದರು. ಪಿಆರ್‌ಓ ರೋಹಿ ರತ್ನಾಕರ್ ವಂದಿಸಿದರು. ಹೇಮಲತಾ ಬಂಗೇರ ಕಾರ್ಯ ಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article