ದುಬೈಯಲ್ಲಿ ಉಚಿತ ಕನ್ನಡ ಕಲಿಕಾ ತರಗತಿಗಳು ನವಂಬರ್ 1ರಿಂದ ಆರಂಭ; ಮಕ್ಕಳನ್ನು ನೋಂದಾಯಿಸಲು ವಿನಂತಿ...
ದುಬೈ: ಕನ್ನಡ ಮಿತ್ರರು ಯುಎಇ ಆಯೋಜನೆಯ ಕನ್ನಡ ಪಾಠಶಾಲೆ ದುಬೈನ 11ನೇ ವರ್ಷದ ಉಚಿತ ಕನ್ನಡ ಕಲಿಕಾ ತರಗತಿಗಳು ಆರಂಭವಾಗಲಿದ್ದು, ಈ ಉಚಿತ ತರಗತಿಗೆ ಮಧ್ಯಪ್ರಾಜ್ಯದ ಎಲ್ಲಾ ಕನ್ನಡಿಗರಿಗೂ ತಮ್ಮ ಮಕ್ಕಳನ್ನು ನೋಂದಾಯಿಸಬೇಕಾಗಿ ದುಬೈ ಕನ್ನಡ ಪಾಠಶಾಲೆಯಾ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ವಿನಂತಿಸಿಕೊಂಡಿದ್ದಾರೆ.
ತರಗತಿಗಳು ನವಂಬರ್ 1 ರಿಂದ ಆರಂಭವಾಗಿ ಆರು ತಿಂಗಳ ಕಾಲ ನಡೆಯಲಿದ್ದು, ವಾರ್ಷಿಕ ಪರೀಕ್ಷೆ ಮತ್ತು ವಾರ್ಷಿಕೋತ್ಸವದೊಂದಿಗೆ ಮೇ -2025 ಕ್ಕೆ ಮುಕ್ತಾಯವಾಗಲಿದೆ.
ಆನ್ಲೈನ್ ರಿಜಿಸ್ಟ್ರೇಷನ್ ಆರಂಭ: 2ನೇ ಅಕ್ಟೊಬರ್ 2024
ನೊಂದಾಯಿಸಲು ಕೊನೆಯ ದಿನಾಂಕ: 20ನೇ ಅಕ್ಟೋಬರ್-2024.
ಕನ್ನಡ ಪಾಠಶಾಲೆ ದುಬೈನ ಉಚಿತ ತರಗತಿಗಳಿಗೆ ನೋಂದಾಯಿಸಲು ಕೆಳಕಂಡ ಆನ್ಲೈನ್ ರಿಜಿಸ್ಟ್ರೇಷನ್ ಲಿಂಕ್ ಅನ್ನು ಒತ್ತಿ
ಹೊಸ ವಿದ್ಯಾರ್ಥಿಗಳ ನೊಂದಾವಣೆ ಲಿಂಕ್:
https://forms.gle/vVqw9dTg7J9Din8h7
ಹಳೆಯ ವಿದ್ಯಾರ್ಥಿಗಳ ನೊಂದಾವಣೆ ಲಿಂಕ್
https://forms.gle/kJPnScX7z3N98px56
ಶಾಲಾ ತರಗತಿಗಳು ಆನ್ಲೈನ್ Zoom ನಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರ ಹಲವು ಹಂತಗಳಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕನ್ನಡ ಪಾಠಶಾಲೆ ದುಬೈನ ವೆಬ್ಸೈಟ್ ಅನ್ನು ನೋಡಿ : https://www.kannadashaale.com ಅಥವಾ ಮುಖ್ಯ ಶಿಕ್ಷಕಿ ಶ್ರೀಮತಿ ರೂಪ ಶಶಿಧರ ರವರನ್ನು ಸಂಪರ್ಕಿಸಿ +971504229394