ದಾಂಡೇಲಿಯಲ್ಲಿ ಕೆನರಾ ವೃತ್ತ 70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ
Thursday, October 10, 2024
ದಾಂಡೇಲಿಯಲ್ಲಿ ನಿನ್ನೆ ಆಯೋಜಿಸಲಾದ ಕೆನರಾ ವೃತ್ತ 70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ರವರು ಮಾತನಾಡಿದರು.
ಭೂಮಿಗೆ ಕಾಡು ಭೂಷಣ, ಕಾಡಿಗೆ ವನ್ಯ ಜೀವಿ, ಸಸ್ಯ ಸಂಕುಲವೇ ಭೂಷಣ. ಇಂತಹ ವನ, ವನ್ಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಇದೇ ಸಂಧರ್ಭದಲ್ಲಿ ನಾನು ದಾಂಡೇಲಿ ಸಮೀಪದ ಕೇಳಪಾನಿಗೆ ಭೇಟಿ ನೀಡಿದಾಗ ಆದ ಆನಂದ ಅಪರಿಮಿತ, ಇದು ಅತ್ಯಂತ ರಮಣೀಯ ಹಾಗೂ ಅತ್ಯದ್ಭುತ ತಾಣ ಎಂದು ಸಚಿವರು ಬಣ್ಣಿಸಿದ್ದಾರೆ.