ಸೆಲ್ಫಿ ತೆಗೆಯಲು ಹೋಗಿ ತುಮಕೂರಿನ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿಯ ರಕ್ಷಣೆ!

ಸೆಲ್ಫಿ ತೆಗೆಯಲು ಹೋಗಿ ತುಮಕೂರಿನ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿಯ ರಕ್ಷಣೆ!

ತುಮಕೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿಯೊಬ್ಬಳನ್ನು ರಕ್ಷಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಹಂಸಾ (19) ತುಮಕೂರು ಜಿಲ್ಲೆಯ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ರವಿವಾರ ಕೊಚ್ಚಿ ಹೋಗಿದ್ದಳು. ಸತತ 12 ಗಂಟೆಗಳ ಕಾರ್ಯಾಚರಣೆ ಮೂಲಕ ಅಗ್ನಿ ಶಾಮಕ ದಳದವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಕಲ್ಲುಬಂಡೆಯ ಗುಹೆಯೊಳಗೆ ಯುವತಿ ಹಂಸಾ ಸಿಲುಕಿಕೊಂಡಿದ್ದಳು. ಅದೃಷ್ಟವಶಾತ್ ಆ ಭಾಗದಲ್ಲಿ ಮುಂಡಿಯುದ್ದಕ್ಕಷ್ಟೇ ನೀರಿತ್ತು. ಹಾಗಾಗಿ ಹಂಸಾಳಿಗೆ ತೊಂದರೆಯಾಗಿಲ್ಲ. ರಕ್ಷಣೆ ಮಾಡಿದ ಬಳಿಕ ಹಂಸಾಳನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಾ, ಮಂದಾರಗಿರಿ ನೋಡಿಕೊಂಡು ಜಲಪಾತ ನೋಡಲು ನಾನು ಮತ್ತು ನನ್ನ ಸ್ನೇಹಿತೆ ಕೀರ್ತನಾ ಹೋಗಿದ್ದೆವು. ಸೆಲ್ಫಿ ಮುಗಿಸಿಕೊಂಡು ವಾಪಸ್ ಬರುವಾಗ ಬಂಡೆ ಜಾರಿ ಕೆಳಕ್ಕೆ ಬಿದ್ದೆ. ನನಗೆ ಈಜು ಬರೋದಿಲ್ಲ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡೆ. ಬಂಡೆಯೊಳಗೆ ಸ್ವಲ್ಪ ಆಕಾಶ ಕಾಣಿಸುತ್ತಿತ್ತು. ಇಂಥ ಜಾಗಕ್ಕೆ ಹೋಗುವಾಗ ಜಾಗೃತೆಯಿಂದ ಹೋಗಬೇಕು. ಮಂಡಿ ಮೇಲೆ ನಿಂತಿದ್ದರಿಂದ ಮಂಡಿ ನೋವಿದೆ. ಮಂಡಿ ಸಪೋರ್ಟ್ ಬಿಟ್ಟರೆ ನಾನು ನೀರಿನಲ್ಲಿ ಕೊಚ್ಚಿ ಹೋಗುತಿದ್ದೆ. ಅಲ್ಲದೇ ತಹಶಿಲ್ದಾರ್ ಹಾಗೂ ಅಗ್ನಿ ಶಾಮಕ ದಳದವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾಳೆ.  

Ads on article

Advertise in articles 1

advertising articles 2

Advertise under the article