ನಾಳೆ (ನವೆಂಬರ್ 14) ರಿಯಾದ್'ನಲ್ಲಿ ನಡೆಯಲಿದೆ ಅದ್ದೂರಿಯ ಮಲೆನಾಡ ಸಂಗಮ ಕಾರ್ಯಕ್ರಮ
Wednesday, November 13, 2024
ರಿಯಾದ್: ಮಲೆನಾಡಿಗರ ಆಶಾ ಗೋಪುರ ಮಲ್ನಾಡ್ ಗಲ್ಫ್ ಟ್ರಸ್ಟ್ ರಿಯಾದ್ ಝೋನ್ ಇದರ ಅಧೀನದಲ್ಲಿ ನಡೆಯಲಿರುವ ಮಲೆನಾಡ ಸಂಗಮ ಕಾರ್ಯಕ್ರಮವು ನಾಳೆ (ನವೆಂಬರ್ 14ರಂದು) ಗುರುವಾರ ರಾತ್ರಿ 9 ಗಂಟೆಗೆ ರಿಯಾದಿನ ಎಲೆಕ್ಟ್ರೋನಿಯಾ ಇಸ್ತಿರಾ(Electronia Istirah)ದಲ್ಲಿ ನಡೆಯಲಿದೆ.
ಮಲೆನಾಡ ಸಂಗಮ ಕಾರ್ಯಕ್ರಮದಲ್ಲಿ ಖಿರಾಹತ್, ರಸ ಪ್ರಶ್ನೆ, ಕಲೆ-ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರುಚಿಯಾದ ಮಲ್ನಾಡ್ ಬಿರಿಯಾನಿ ಕೂಡ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಕೋರಿದ್ದಾರೆ.