ಹಾಜಿ ಎ.ಕೆ.ಮುಹಮ್ಮದ್ ಕುಂತೂರು ನಿಧನಕ್ಕೆ ಕಂಬನಿ ಮಿಡಿದ ಗಣ್ಯರು
ಮಂಗಳೂರು: ಗುರುವಾರ ನಿಧನರಾದ ಹಾಜಿ ಎ.ಕೆ.ಮುಹಮ್ಮದ್ ಕುಂತೂರು ಅವರ ದಫನ ಕಾರ್ಯವು ಶುಕ್ರವಾರ ಕುಂತೂರು ಜುಮ್ಮಾ ಮಸೀದಿಯಲ್ಲಿ ಅಪಾರ ಬಂಧು ಬಳಗದ ಸಮ್ಮುಖದಲ್ಲಿ ನೆರವೇರಿತು.
ಗುರುವಾರ ಅಸರ್(ಸಂಜೆ) ನಮಾಜ್ ಆಗುತ್ತಿದ್ದ ವೇಳೆ ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹ ಕುತ್ತಾರಿನ ಮೋತಿಶ್ಯಾಮ್ ಅಪಾರ್ಟ್ ಮೆಂಟ್'ನಲ್ಲಿ ಹಾಜಿ ಎ.ಕೆ.ಮುಹಮ್ಮದ್ ಕುಂತೂರು ನಿಧನರಾಗಿದ್ದರು.
ಅವರ ನಿಧನಕ್ಕೆ ಆಧ್ಯಾತ್ಮೀಕ ಪಂಡಿತ ಅಮೀರ್ ಅಲಿ ತಂಙಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಮಂಡಳಿಯ ಅಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಫರೀದ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕರ್ನಾಟಕ ಸರಕಾರ ಇದರ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉದ್ಯಮಿ, ಸಾಮಾಜಿಕ ಮುಂದಾಳು ಅಶ್ರಫ್ ಶಿರಿಯಾ, ಅಲೆಮಾರಿ/ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜೆಡಿಎಸ್ ಧುರಿಣರಾದ ಹೈದರ್ ಪರ್ತಿಪ್ಪಾಡಿ, ಅಬೂಬಕರ್ ನಾಟೆಕಲ್, SDPI ನಾಯಕ ರಿಯಾಜ್ ಫರಂಗಿಪೇಟೆ ಸೇರಿದಂತೆ ಹಲವು ಸರ್ವ ಮತ ಧರ್ಮ ಬಾಂಧವರು ಕಂಬನಿ ಮಿಡಿದಿದ್ದಾರೆ.