ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್ ಆಶ್ರಯದಲ್ಲಿ ದುಬೈಯಲ್ಲಿ ಫೆಬ್ರವರಿ 9ರಂದು ಅದ್ಧೂರಿ 'ಬ್ಯಾರಿ ಮೇಳ-2025'; ಅನಾವರಣಗೊಳ್ಳಲಿದೆ ಬ್ಯಾರಿ ಸಂಸ್ಕೃತಿ, ವಿಶೇಷ ಅಡುಗೆಗಳು, ಸಮುದಾಯದ ಆಚರಣೆಗಳು

ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್ ಆಶ್ರಯದಲ್ಲಿ ದುಬೈಯಲ್ಲಿ ಫೆಬ್ರವರಿ 9ರಂದು ಅದ್ಧೂರಿ 'ಬ್ಯಾರಿ ಮೇಳ-2025'; ಅನಾವರಣಗೊಳ್ಳಲಿದೆ ಬ್ಯಾರಿ ಸಂಸ್ಕೃತಿ, ವಿಶೇಷ ಅಡುಗೆಗಳು, ಸಮುದಾಯದ ಆಚರಣೆಗಳು

ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್ ಆಶ್ರಯದಲ್ಲಿ  2025ರ ಫೆಬ್ರವರಿ 9ರಂದು ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ 'ಬ್ಯಾರಿ ಮೇಳ-2025' ನಡೆಯಲಿದೆ.

ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದೊಂದಿಗೆ ನಡೆಯುವ ಈ ಅದ್ದೂರಿ 'ಬ್ಯಾರಿ ಮೇಳ-2025'ರ ಪೋಸ್ಟರ್ ಬಿಡುಗಡೆ ಸಮಾರಂಭವು ಡಿ.8ರಂದು ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ನಡೆಯಿತು. 







ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಖ್ಯಾತ ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್, ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಯುಎಇಯ ಬ್ಯಾರೀಸ್ ಚೇಂಬರ್ ಅಧ್ಯಕ್ಷ ಹಿದಾಯತ್ ಅಡ್ಡೂರ್ ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರದ ಇತಿಹಾಸದ ಬಗ್ಗೆ ಮಾತನಾಡಿ, ಬ್ಯಾರೀಸ್ ಚೇಂಬರ್‌ನ ಗುರಿ ಹಾಗೂ ಬ್ಯಾರಿ ಮೇಳದ ಉದ್ದೇಶದ ಬಗ್ಗೆ ಮಾತನಾಡಿದರು. 

ಬ್ಯಾರಿ ಮೇಳದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ, ಭಾಗವಹಿಸಿಸುವ ಅತಿಥಿಗಳ ಬಗ್ಗೆ ಉಪಾಧ್ಯಕ್ಷ ಬಶೀರ್ ಕಣ್ಣಂಗಾರ್, ಹಂಝ ಅಬ್ದುಲ್ ಖಾದರ್, ಮಹಮ್ಮದ್ ಅಲಿ ಉಚ್ಚಿಲ್, ಇಮ್ರಾನ್ ಎರ್ಮಾಳ್ ವಿವರಿಸಿದರು. 




ಅಂದು ನಡೆಯಲಿರುವ ಉದ್ಯೋಗ ಮೇಳ, ದೊರಕಲಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮಹಮ್ಮದ್ ಮುಸ್ತಾಕ್ ಮಾಹಿತಿ ನೀಡಿದರು.

ಬ್ಯಾರಿ ಮೇಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 60ಕ್ಕೂ ಹೆಚ್ಚಿನ ಮಳಿಗೆಗಳು ಇರಲಿವೆ. 









ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಯುಎಇಯ ಪ್ರಮುಖ ಬ್ಯಾರಿ ಸಂಘಟನೆಗಳಾದ ಬಿಸಿಎಫ್, ಬಿಡಬ್ಲ್ಯೂಎಫ್, ಕೆಸಿಎಫ್, ಕೆಐಸಿ, ದಾರುಲ್ ಇರ್ಷಾದ್, ಡಿಕೆಎಸ್‌ಸಿ, ಕೆಎಂಎಎಸ್, ಹಿದಾಯ ಫೌಂಡೇಶನ್, ಕೆಡಿಸಿ, ಅಲ್ ಖಮರ್, ಎಸ್‌ಯುಎಸಿ, ಪ್ರವಾಸಿ ಕೂಟ ವಿಟ್ಲ, ಟಿಓಡಿ, ಕೆಎಎಫ್, ಕೆಎಂಎಜೆ, ಎಂಎಫ್‌ಡಿ, ಎಸ್‌ಕೆಎಸ್‌ಎಸ್‌ಎಫ್ ಯುಎಇ, ದಾರುನ್ನೂರು, ದಾರುಸ್ಸಲಾಂ, ಶಂಶುಲ್ ಉಲಾಮ ಸೆಂಟರ್, ದಾರುಲ್ ಹಸನಿಯ್ಯ ಎಜುಕೇಷನ್ ಸೆಂಟರ್, ಅಲ್ ಇಸ್ಲಾಮೀಯ ವೆಲ್ಫೇರ್, ಮೂಳೂರು ವೆಲ್ಫೇರ್, ಅಲ್ ಹುದಾ, ಅಲ್ ಇಬಾದ್ ಇಂಡಿಯನ್ ಸ್ಕೂಲ್, ನೂರ್ ಫ್ರೆಂಡ್ಸ್, ಸಾದಿಯ ಬೆಂಗಳೂರು, ಕೊಡಗು ವೆಲ್ಫೇರ್, ಮಸ್ದರ್ ಕೊಪ್ಪಳ, ಅಲ್ ಮದೀನಾ ಮಂಜನಾಡಿ, ಮುಹಿನ್ನುಸುನ್ನ ದಾವಣಗೆರೆ, ಮರ್ಕಝ್ ಉಲ್ ಹುದಾ ಕುಂಬ್ರ, ದಾರುಲ್ ಹಿದಾ ಬೆಳ್ಳಾರೆ ಹಾಗೂ ಹಲವು ಮುಖಂಡರು, ಉದ್ಯಮಿಗಳು ಭಾಗವಹಿಸಿದರು.

ಬ್ಯಾರಿ ಮೇಳ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಂತೂರ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬ್ಯಾರೀಸ್ ಚೇಂಬರ್ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. 

Beary Mela 2025
The Bearys Chamber of Commerce & Industry (BCCI) is excited to announce Beary Mela 2025, a spectacular celebration of Beary culture, cuisine, and community!
📅 Date: February 9, 2025
📍 Venue: Etisalat Academy Grounds, Dubai
Event Highlights:
• Authentic Coastal & Beary Food Stalls
• Prestigious Award Ceremony
• Engaging Seminars
• Exclusive Job Fair
• Fun Games & Activities for Kids and Families
🎉 A Warm Invitation to All Bearys in the UAE
Come together to celebrate, network, and showcase your talents or businesses at this vibrant event.
🔸 Interested in setting up a food stall or displaying your business?
Reach out to any BCCI member or call us at +971 55 111 8555.

Ads on article

Advertise in articles 1

advertising articles 2

Advertise under the article