ಉದ್ಯಾವರದಲ್ಲಿ ಯುವಕನೋರ್ವ ಆತ್ಮಹತ್ಯೆ! ಕಾರಣ ನಿಗೂಢ...
Sunday, December 15, 2024
ಉಡುಪಿ: ಉದ್ಯಾವರ ಬೊಳ್ಜೆ ನಿವಾಸಿ ಆದಿತ್ಯ (24) ಎಂಬ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಣಿಪಾಲದ ಪೆರಂಪಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬಳಿಕ ಮನೆಗೆ ಬಂದ ಆದಿತ್ಯ ಮುಂಜಾನೆ 4 ಗಂಟೆಯ ಸುಮಾರಿಗೆ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದಿತ್ಯ ಕಳೆದ ವರ್ಷ ಅಪಘಾತದಲ್ಲಿ ನಿಧನರಾಗಿದ್ದ ಸ್ನೇಹಿತ ಸುಕ್ಷಿತ್ ಹೆಸರಿನಲ್ಲಿ ಕ್ರಿಕೆಟ್ ತಂಡವೊಂದನ್ನು ಕಟ್ಟಿದ್ದ. ಮನೆಯಲ್ಲಿ ಚಿಕ್ಕಮ್ಮನೊಂದಿಗೆ ವಾಸವಾಗಿರುವ ಆದಿತ್ಯ, ತನ್ನ ಸ್ನೇಹಿತ ನಿಧನ ಬಳಿಕ ಖಿನ್ನತೆಗೆ ಒಳಗಾಗಿದ್ದ ಎಂದು ಆತನ ಗೆಳೆಯರು ತಿಳಿಸಿದ್ದಾರೆ.