ಬೈಂದೂರು: ಜಸ್ಕಿ ರೈಡರ್ ರವಿ ಮೃತದೇಹ ಮೂರು ದಿನದ ಬಳಿಕ ಪತ್ತೆ
Monday, December 23, 2024
ಬೈಂದೂರು: ಬೃಹತ್ ಗಾತ್ರದ ಅಲೆವೊಂದು ಬಡಿದು ವಾಟರ್ ಸ್ಪೋರ್ಟ್ಸ್ 'ಜಸ್ಕಿ' ಪಲ್ಟಿಯಾದ ಪರಿಣಾಮ ರೈಡರ್ ರವಿ ದಾಸ್ ಎಂಬವರು ಸಮುದ್ರ ಪಾಲಾಗಿದ್ದು, ಮೂರು ದಿನಗಳ ಬಳಿಕ ಇಂದು ಮುಂಜಾನೆ ಅವರ ಮೃತದೇಹ ಪತ್ತೆಯಾಗಿದೆ.
ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಬೀಚಿನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿತ್ತು. ಮೀನುಗಾರರು ದಿನನಿತ್ಯದಂತೆ ಸಮುದ್ರಕ್ಕೆ ತೆರಳುವ ಬೆಳಗಿನ ಜಾವದ ವೇಳೆ ತ್ರಾಸಿ ಬಳಿಯ ಕಂಚು ಗೋಡು ಸಮುದ್ರದ ಕಿನ್ನಾರೆಯ ದಡದಲ್ಲಿ ಮೀನುಗಾರರಿಗೆ ಮೃತದೇಹ ಸಿಕ್ಕಿದೆ. ಮೀನುಗಾರರು ತಕ್ಷಣ ಸಂಬಂಧಪಟ್ಟವರಿಗೆ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.