ಹೆಬ್ಬಾಳ್ಕರ್'ರನ್ನು 10-12 ಬಾರಿ ನೀನೊಬ್ಬ ಪ್ರಾಸ್ಟಿಟ್ಯೂಟ್ ಅಂತಾ ಸಿಟಿ ರವಿ ಕರೆದಿದ್ದಾನೆ; ಆ ನಾಲಿಗೆ ಹೊಲಸು, ಎಲ್ಲರ ಮೇಲೂ ಈ ರೀತಿ ಪದ ಆಡಿದೆ: ಡಿಕೆ ಶಿವಕುಮಾರ್

ಹೆಬ್ಬಾಳ್ಕರ್'ರನ್ನು 10-12 ಬಾರಿ ನೀನೊಬ್ಬ ಪ್ರಾಸ್ಟಿಟ್ಯೂಟ್ ಅಂತಾ ಸಿಟಿ ರವಿ ಕರೆದಿದ್ದಾನೆ; ಆ ನಾಲಿಗೆ ಹೊಲಸು, ಎಲ್ಲರ ಮೇಲೂ ಈ ರೀತಿ ಪದ ಆಡಿದೆ: ಡಿಕೆ ಶಿವಕುಮಾರ್

ಬೆಳಗಾವಿ: 'ಆ ನಾಲಿಗೆ ಹೊಲಸು, ಎಲ್ಲರ ಮೇಲೂ ಈ ರೀತಿ ಪದ ಆಡಿದೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ಮಾತನಾಡಿದ ಅವರು,‌ "ಅಮಿತ್ ಶಾ ಹೇಳಿಕೆಯಿಂದ ದೇಶಾದ್ಯಂತ ಪ್ರತಿಭಟನೆ ನಡಿಯುತ್ತಿದೆ. ವಿಧಾನ ಪರಿಷತ್‌ನಲ್ಲೂ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಸಿಟಿ ರವಿ ಮತ್ತೆ ರವಿಕುಮಾರ್ ಇವರೆಲ್ಲಾ ಸೇರಿ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ನಾಯಕ ಅಂದಿದ್ದಾರೆ," ಎಂದರು.

"ಈ ವೇಳೆ ತಮ್ಮ ಪಕ್ಷದ ನಾಯಕರನ್ನು ಹೆಸರು ಹೇಳಿ ಅವಹೇಳನಕಾರಿಯಾಗಿ ಮಾತಾಡಿದಕ್ಕೆ ಅವರನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಸಿಟಿ ರವಿಗೆ ಕೊಲೆಗಟುಕ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕರೆದಿದ್ದಾರೆ," ಎಂದು ಡಿಕೆ ಶಿವಕುಮಾರ್ ವಿವರಿಸಿದರು.

"ಈ ವೇಳೆ 10-12 ಬಾರಿ ಸಿಟಿ ರವಿ ನೀನೊಬ್ಬ ಪ್ರಾಸ್ಟಿಟ್ಯೂಟ್ ಅಂತಾ ಕರೆದಿದ್ದಾನೆ. ನಮ್ಮ ಗೃಹಲಕ್ಷ್ಮಿ ನಡೆಸುತ್ತಿರುವ ಹೆಣ್ಣುಮಗಳು, ಸರ್ಕಾರದ ಮಂತ್ರಿಗೆ ಈ ರೀತಿ ಕರೆದಿದ್ದಾರೆ," ಎಂದು ಸಿಟಿ ರವಿ ವಿರುದ್ಧ ಕಿಡಿಕಾರಿದರು.

ಈ ನಿಟ್ಟಿನಲ್ಲಿ ಅವರ ವಿರುದ್ಧ ಎಫ್‌ಐಆರ್‌ ಆಗಿದೆ. ಪೊಲೀಸರು ಕಾನೂನಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಕೈಗೊಂಡಿದ್ದಾರೆ ಎಂದು ಇದೇ ವೇಳೆ ಪೊಲೀಸರ ನಡೆಯನ್ನು ಡಿಕೆ ಶಿವಕುಮಾರ್‌ ಸಮರ್ಥಿಸಿಕೊಂಡರು.

"ಚಿಕ್ಕಮಗಳೂರು ಸಂಸ್ಕೃತಿಯ ಜಿಲ್ಲೆ, ಆ ಜನರನ್ನು ನಾನು ಅರಿತಿದ್ದೇನೆ. ಆದರೆ ಈ ನಾಲಿಗೆ ಹೊಲಸು, ಎಲ್ಲರ ಮೇಲೂ ಆ ನಾಲಿಗೆ ಈ ರೀತಿ ಪದ ಆಡಿದೆ," ಎಂದು ಸಿಟಿ ರವಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.

"ಈ ನಾಲಿಗೆಯಲ್ಲಿ ಎಲ್ಲಿದೆ ಸಂಸ್ಕೃತಿ? ಆಚಾರ ವಿಚಾರ ಎಲ್ಲಿದೆ? ಈ ಹೆಣ್ಣು ಮಗಳು ಎಷ್ಟು ದುಃಖ, ನೋವಿನಿಂದ ನಿನಗೆ ತಾಯಿ ಇಲ್ವಾ? ನಿನಗೆ ತಂಗಿ ಇಲ್ವಾ? ಮಕ್ಕಳಿಲ್ಲವಾ? ಕಿರಿಚಿದ್ದಾರೆ. ಆಕೆ ಒಬ್ಬಳೇ ಅಲ್ಲ, ನಮ್ಮ ಪಕ್ಷ, ಸರ್ಕಾರ, ಹೆಣ್ಣು ಕುಲ, ಕರ್ನಾಟಕ ತಾಯಂದಿರು ರಕ್ಷಣೆ ನಿಂತುಕೊಳ್ಳುತ್ತೇವೆ," ಎಂದು ಡಿಕೆ ಶಿವಕುಮಾರ್‌ ಧೈರ್ಯ ತುಂಬಿದರು.

ವಿಧಾನ ಪರಿಷತ್ ಸಭಾಪತಿಗಳು ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕಿತ್ತು ಎಂದ ಅವರು, 'ಸದನ ವ್ಯಾಪ್ತಿ ಮೀರಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ' ಎಂಬ ಬಿಜೆಪಿ ಆರೋಪ ವಿಚಾರವಾಗಿ, "ಹಾಗಿದ್ರೆ ನೀನು ಒಳಗಡೆ ಕೊಲೆ ಬೇಕಿದ್ರೂ ಮಾಡಬಹುದಾ? ಏನು ಬೇಕಿದ್ರೂ ಅವಾಚ್ಯ ಶಬ್ದ ಬಳಸಬಹುದಾ?" ಎಂದು ಮರು ಪ್ರಶ್ನಿಸಿದರು.

ನಾನು ಯಾರನ್ನು ಬೇಕಿದ್ರೂ ಏನು ಅಂದ್ರೂ ರಕ್ಷಣೆ ಸಿಗುತ್ತಾ? ಅಷ್ಟೊಂದು ಹಿರಿಯ ನಾಯಕರಾಗಿ ಅವರಿಗೆ ಇದು ಶೋಭೆ ತರಲ್ಲ ಹಾಗೂ ಅವರ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದರು.

Ads on article

Advertise in articles 1

advertising articles 2

Advertise under the article