ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್‌ ಮೇಲ್‌; ಯುವತಿಯಿಂದ ಐಷಾರಾಮಿ ಕಾರು, ₹2.57 ಕೋಟಿ ದೋಚಿದ ಪ್ರಿಯಕರನ ಬಂಧನ

ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್‌ ಮೇಲ್‌; ಯುವತಿಯಿಂದ ಐಷಾರಾಮಿ ಕಾರು, ₹2.57 ಕೋಟಿ ದೋಚಿದ ಪ್ರಿಯಕರನ ಬಂಧನ


ಬೆಂಗಳೂರು: ತನ್ನ ಹೈಸ್ಕೂಲ್‌ ಗೆಳತಿಗೆ ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್‌ ಮೇಲ್‌ ಮಾಡಿ 2.57 ಕೋಟಿ ರೂ. ಹಣ ಸುಲಿಗೆ ಮಾಡಿದ್ದ ಖತರ್ನಾಕ್‌ನನ್ನ ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಲಾಕ್ ಮೇಲರ್ ಪ್ರಿಯತಮ ಮೋಹನ್ ಕುಮಾರ್ ಬಂಧಿತ ಆರೋಪಿ. ಉದ್ಯಮಿಯೊಬ್ಬರ 21 ವರ್ಷದ ಪುತ್ರಿಯು ನೀಡಿದ ದೂರು ಆಧರಿಸಿ ಮೋಹನ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಲಿಗೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 100 ಗ್ರಾಂ. ಚಿನ್ನಾಭರಣ, ಎರಡು ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಯುವತಿಗೆ 2019ರಿಂದಲೇ ಆರೋಪಿ ಪರಿಚಯವಾಗಿದ್ದ. ದೇವನಹಳ್ಳಿಯ ಖಾಸಗಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು. ಆಗ ಇಬ್ಬರಿಗೆ ಪರಿಚಯವಾಗಿ ಬಳಿಕ ಪ್ರೀತಿ ಶುರುವಾಗಿತ್ತು. ರಜೆಯಲ್ಲಿ ಮನೆಯವರಿಗೆ ತಿಳಿಯದಂತೆ ಗೋವಾ ಸೇರಿ ಹಲವು ಕಡೆಗೆ ಇಬ್ಬರೂ ಟ್ರಿಪ್ ಹೋಗ್ತಿದ್ರು. ಮೋಹನ್ ಕುಮಾರ್ ಹಾಗೂ ಆತನ ಗೆಳೆಯರೊಂದಿಗೆ ಯುವತಿ ಟ್ರಿಪ್ ಹೋಗ್ತಿದ್ದಳು. ಆಗ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಅದನ್ನ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾನೆ. ಕೆಲ ದಿನಗಳ ನಂತರ ಖಾಸಗಿ ವಿಡಿಯೋ ಹಾಗೂ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದಾನೆ.

ಖಾಸಗಿ ವೀಡಿಯೋ ತೋರಿಸಿ, ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾನೆ. ಹಣ ಕೊಡದಿದ್ದರೆ, ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಯುವತಿ ತನ್ನ ಅಜ್ಜಿ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿದ್ದಾಳೆ. ಆರೋಪಿ ಮೋಹನ್‌ ಹೇಳಿದಂತೆ ಆತನ ಕುಟುಂಸ್ಥರು ಹಾಗೂ ಆತನ ಗೆಳಯರ ಖಾತೆಗೆ ಹಂತ ಹಂತವಾಗಿ 1.25 ಕೋಟಿ ರೂ. ಗಣ ವರ್ಗಾವಣೆ ಮಾಡಿದ್ದಾಳೆ, ಜೊತೆಗೆ ಬರೋಬ್ಬರಿ 1.32 ಕೋಟಿ ರೂ. ನಗದು ಹಣ ನೀಡಿದ್ದಾಳೆ. 

ಪೊಲೀಸರಿಗೆ ದೂರು ನೀಡಿದ್ರೆ ಆಕೆ ಹಾಗೂ ಕುಟುಂಬಸ್ಥರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಯುವತಿ ಹೇಳಿದಂತೆ ದುಡ್ಡುಕೊಟ್ಟಿದ್ದಾಳೆ. ಇದಾದ ನಂತರವೂ ಆರೋಪಿ ಮೋಹನ್‌ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕೊನೆಗೆ ರೋಸಿಹೋಗಿ ಮೋಹನ್ ಮತ್ತು ಆತನ ಕುಟುಂಸ್ಥರ ವಿರುದ್ಧ ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಮೋಹನ್, ತಂದೆ ಆಶ್ವತ್ಥ್ ನಾರಾಯಣ ಹಾಗೂ ಕುಟುಂಸ್ಥರಾದ ಪ್ರೀತಿ, ಲಿಖಿತಾ, ಲವಕುಮಾರ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಯುವತಿಯಿಂದ ಹಣ ಮಾತ್ರವಲ್ಲದೇ ಬಲವಂತವಾಗಿ ಚಿನ್ನ, ಗಾಡಿ, ದುಬಾರಿ ವಾಚ್ ಪಡೆದುಕೊಂಡಿರುವ ಆರೋಪವೂ ಕೇಳಿಬಂದಿದೆ.

Ads on article

Advertise in articles 1

advertising articles 2

Advertise under the article