ಇಂಥ ಅದ್ದೂರಿ ಮದುವೆ ನೀವು ನೋಡಿರಲಿಕ್ಕಿಲ್ಲ! ವಧುವಿನ ಕುಟುಂಬದವರು ವರನಿಗೆ ನೀಡಿದ ಬಂಪರ್‌ ಉಡುಗೊರೆ ನೋಡಿ ಶಾಕ್ ! ವರದಕ್ಷಿಣೆಯ ರೂಪದಲ್ಲಿ ಕೊಟ್ಟಿದ್ದು 2.56 ಕೋಟಿ ನಗದು...ಇನ್ನೇನು ನೀಡಿದ್ದಾರೆ ನೋಡಿ...

ಇಂಥ ಅದ್ದೂರಿ ಮದುವೆ ನೀವು ನೋಡಿರಲಿಕ್ಕಿಲ್ಲ! ವಧುವಿನ ಕುಟುಂಬದವರು ವರನಿಗೆ ನೀಡಿದ ಬಂಪರ್‌ ಉಡುಗೊರೆ ನೋಡಿ ಶಾಕ್ ! ವರದಕ್ಷಿಣೆಯ ರೂಪದಲ್ಲಿ ಕೊಟ್ಟಿದ್ದು 2.56 ಕೋಟಿ ನಗದು...ಇನ್ನೇನು ನೀಡಿದ್ದಾರೆ ನೋಡಿ...

ಉತ್ತರಪ್ರದೇಶ: ಅದ್ದೂರಿ ಮದುವೆಯ ಸುದ್ದಿಗಳ ನಡುವೆ ಇಲ್ಲೊಂದು ರಾಯಲ್‌ ಆಗಿ ನಡೆದ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮದುವೆ ಸುದ್ದಿಯಲ್ಲಿರುವುದು ಐಷಾರಾಮಿ ಅಲಂಕಾರಗಳು, ಬಗೆಬಗೆಯ ಆಹಾರ, ರಾಜಾತಿಥ್ಯಗಳಿಗಲ್ಲ. ಬದಲಿಗೆ ಈ ರಾಯಲ್‌ ವೆಡ್ಡಿಂಗ್‌ ಸುದ್ದಿಯಾಗಿದ್ದು, ವಧುವಿನ ಕುಟುಂಬದವರು ವರನಿಗೆ ನೀಡಿದ ಬಂಪರ್‌ ಉಡುಗೊರೆಗಳಿಗಾಗಿ. ಹೌದು ವಧುವಿನ ಮನೆಯವರು ಮದುಮಗನಿಗೆ 75 ಲಕ್ಷ ಮೌಲ್ಯದ ಕಾರು, 2.56 ಕೋಟಿ ಹಣವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿದ್ದು, ಈ ದೃಶ್ಯ ಸಖತ್‌ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಮೀರತ್‌ನ ರೆಸಾರ್ಟ್‌ ಒಂದರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಈ ಅದ್ದೂರಿ ಮದುವೆ ಸಮಾರಂಭ ನೆರವೇರಿದ್ದು, ಮದುವೆ ಮಂಟಪದಲ್ಲಿಯೇ ವಧುನಿನ ಕುಟುಂಬಸ್ಥರು ವರನಿಗೆ ಸೂಟ್‌ಕೇಸ್‌ನಲ್ಲಿ 2 ಕೋಟಿ 56 ಲಕ್ಷ ರೂ. ಹಣವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿದ್ದಾರೆ. ಜೊತೆಗೆ ಕಾರ್‌ ಖರೀದಿಸಲು 75 ಲಕ್ಷ ರೂ, ಮದುವೆ ನೆರವೇರಿಸಿದ ಮೌಲಿಗೆ 11 ಲಕ್ಷ ರೂ, ಸ್ಥಳೀಯ ಮಸೀದಿಗೆ ದೇಣಿಗೆಯಾಗಿ 8 ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಇದಲ್ಲದೆ ʼಜೂತಾ ಚೂರೈʼ ಎಂಬ ಸಂಪ್ರದಾಯದ ಭಾಗವಾಗಿ ವರನ ಶೂ ಕದ್ದ ವಧುನಿಕ ಕಡೆಯವರಿಗೆ ಮದುಮಗನ ಮನೆಯವರು 11 ಲಕ್ಷ ರೂ. ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ರಾಯಲ್‌ ವೆಡ್ಡಿಂಗ್‌ ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಕುರಿತ ವಿಡಿಯೋವನ್ನು aaezoo31054 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕಡೆಯವರು ಪರಸ್ಪರ ಎದುರುಬದುರಾಗಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ವರದಕ್ಷಿಣೆಯ ರೂಪವಾಗಿ ವರನಿಗೆ ಸೂಟ್‌ಕೇಸ್‌ನಲ್ಲಿ 2.56 ಕೋಟಿ ರೂ. ಹಣ ಮತ್ತು ಕಾರ್‌ ಖರೀದಿಸಲು 75 ಲಕ್ಷ ರೂಪಾಯಿಯನ್ನು ವಧುವಿನ ಕಡೆಯವರು ವರನಿಗೆ ನೀಡಿದ್ರೆ, ವರನ ಕುಟುಂಬಸ್ಥರು ಜೂತಾ ಚೂರೈಗಾಗಿ ವಧುನಿನ ಕಡೆಯವರಿಗೆ 11 ಲಕ್ಷ ರೂ. ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಡಿಸೆಂಬರ್‌ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಮದುವೆಯೋ ಅಥವಾ ವ್ಯವಹಾರವೋ ತಿಳಿಯುತ್ತಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರಿಂದ ಬಡ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article