ಅತೀ ಶ್ರೀಮಂತ CMಗಳ ಪಟ್ಟಿಯಲ್ಲಿ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಪ್ರಥಮ: ಮಮತಾ ಬ್ಯಾನರ್ಜಿ ಅತೀ ಬಡ ಸಿಎಂ; ಸಿದ್ದರಾಮಯ್ಯ ಯಾವ ಸ್ಥಾನದಲ್ಲಿದ್ದಾರೆ ನೋಡಿ...

ಅತೀ ಶ್ರೀಮಂತ CMಗಳ ಪಟ್ಟಿಯಲ್ಲಿ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಪ್ರಥಮ: ಮಮತಾ ಬ್ಯಾನರ್ಜಿ ಅತೀ ಬಡ ಸಿಎಂ; ಸಿದ್ದರಾಮಯ್ಯ ಯಾವ ಸ್ಥಾನದಲ್ಲಿದ್ದಾರೆ ನೋಡಿ...

ನವದೆಹಲಿ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ದೇಶದ ಸಿಎಂ ಗಳ ಸಂಪತ್ತಿನ ಬಗ್ಗೆ ಕುತೂಹಲಕಾರಿ ವರದಿಯನ್ನು ಪ್ರಕಟಿಸಿದೆ. ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿ ಹೇಳಿದೆ.

ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ ಅಥವಾ ಎನ್‌ಎನ್‌ಐ 2023-2024ಕ್ಕೆ ಸರಿಸುಮಾರು ರೂ 1,85,854 ಆಗಿದ್ದರೆ, ಓರ್ವ ಮುಖ್ಯಮಂತ್ರಿಯ ಸರಾಸರಿ ಸ್ವ-ಆದಾಯ ರೂ 13,64,310 ಆಗಿದೆ, ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು ಎಂದು ADR ತನ್ನ ವರದಿಯಲ್ಲಿ ತಿಳಿಸಿದೆ.

31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂಪಾಯಿಗಳಷ್ಟಿದೆ ಎಂದು ಎಡಿಆರ್ ವರದಿಯ ಮೂಲಕ ತಿಳಿದುಬಂದಿದೆ. ಸಿಎಂ ಗಳ ಸಂಪತ್ತಿನ ಕುರಿತ ಎಡಿಆರ್ ವರದಿಯ ಪ್ರಕಾರ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ ಆಗಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೆಮಾ ಖಂಡು ಅವರಿದ್ದಾರೆ. ಪೆಮಾ ಖಂಡು, ಒಟ್ಟು 332 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕದ ಸಿದ್ದರಾಮಯ್ಯ ಅವರಿದ್ದು ಒಟ್ಟು 51 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಖಂಡು ಅವರು 180 ಕೋಟಿ ರೂ.ಗಳಷ್ಟು ಹೆಚ್ಚಿನ ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ ಅವರು 23 ಕೋಟಿ ಸಾಲ ಹೊಂದಿದ್ದಾರೆ.

ಇನ್ನು ನಂ.1 ಶ್ರೀಮಂತ ಸಿಎಂ ಪಟ್ಟಿಯಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಇದ್ದಾರೆ. ನಾಯ್ಡು ಬಳಿ ಬರೊಬ್ಬರಿ 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ನಾಯ್ಡು 10 ಕೋಟಿ ರೂ.ಗೂ ಹೆಚ್ಚು ಸಾಲ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಎಡಿಆರ್ ವರದಿಯ ಪ್ರಕಾರ ಕೇವಲ 15 ಲಕ್ಷ ಹೊಂದಿರುವ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ ಆಗಿದ್ದಾರೆ.

ಮಮತಾ ಬಳಿಕ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ 55 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ದೇಶದಲ್ಲಿ 2ನೇ ಬಡ ಸಿಎಂ ಆಗಿದ್ದರೆ, 18 ಕೋಟಿಯೊಂದಿಗೆ ಪಿಣರಾಯಿ ವಿಜಯನ್ 3 ನೇ ಸ್ಥಾನದಲ್ಲಿದ್ದಾರೆ.

Ads on article

Advertise in articles 1

advertising articles 2

Advertise under the article