ಜ.12ರಂದು ಯುಎಇ ಡಿ.ಕೆ.ಎಸ್.ಸಿ.ಯ ಸಿಲ್ವರ್ ಜುಬಿಲಿ ಸಮಾರೋಪ; ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮ; ಮುಖ್ಯ ಅತಿಥಿಯಾಗಿ ಯು.ಟಿ.ಖಾದರ್

ಜ.12ರಂದು ಯುಎಇ ಡಿ.ಕೆ.ಎಸ್.ಸಿ.ಯ ಸಿಲ್ವರ್ ಜುಬಿಲಿ ಸಮಾರೋಪ; ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮ; ಮುಖ್ಯ ಅತಿಥಿಯಾಗಿ ಯು.ಟಿ.ಖಾದರ್

ದುಬೈ: ಮಂಗಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಇದರ ಯುಎಇ ರಾಷ್ಟೀಯ ಸಮಿತಿಯ ಸಿಲ್ವರ್ ಜುಬಿಲಿ ಸಮಾರೋಪ ಸಮಾರಂಭ ಹಾಗು ಯುಎಇ ಡಿ.ಕೆ.ಎಸ್.ಸಿ.ಯ  ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮವು ಜನವರಿ 12ರ ರವಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರ ವರಿಗೆ ಅಜ್ಮಾನಿನ ವುಡ್ ಲೆಮ್ ಪಾರ್ಕ್ ಸ್ಕೂಲ್'ನಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 

ವಿಶೇಷವಾಗಿ ಮಕ್ಕಳಿಗೆ ಇಸ್ಲಾಮಿಕ್ ಕ್ವಿಝ್, ಭಾಷಣ, ಹಾಡು, ಕಲರಿಂಗ್ ಸ್ಪರ್ಧೆಗಳು ಹಾಗು ಮಹಿಳೆಯರಿಗಾಗಿ ಮದರಂಗಿ ಸ್ಪರ್ಧೆ, ಅಡುಗೆ ಸ್ಪರ್ಧೆ (Dessert or Sweets), ಕ್ವಿಝ್ ಇನ್ನಿತರ ಸ್ಪರ್ಧೆಗಳು ಹಾಗು ಪುರುಷರಿಗಾಗಿ ಹಗ್ಗ ಜಗ್ಗಾಟ ಇನ್ನಿತರ ಸ್ಪರ್ಧೆಗಳು, ವಿಶೇಷವಾಗಿ ಆಕರ್ಷಕ ವಿವಿಧ ತಂಡಗಳ ಪಥ ಸಂಚಲನ ನಡೆಯಲಿದೆ. 

ಕಾರ್ಯಕ್ರಮವು ಸಯ್ಯದ್ ತ್ವಾಹ ಬಾಫಖಿ ತಂಙಳ್ ಅವರ ದುಃವಾದೊಂದಿಗೆ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಡಾ.ತುಂಬೆ ಮೊಯ್ದಿನ್, ಡಾ.ಬಿ.ಎಂ.ಉಮ್ಮರ್ ಹಾಜಿ, ಝಕಾರಿಯಾ ಜೋಕಟ್ಟೆ, ಅಕ್ರಮ್ ಶೇಖ್, ಎಡ್ವಕೇಟ್ ಖಲೀಲ್, ಇಬ್ರಾಹಿಂ ಗಡಿಯಾರ್,  ಡಾ.ಬಿ.ಕೆ.ಯೂಸುಫ್, ಅಶ್ರಫ್ ಮಾಂತೂರ್, ಜಾಫರ್ ಬಿ.ಎಂ.ಇನ್ನಿತರ ಯುಎಇ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಮತ್ತು ವಿವಿಧ ರಾಷ್ಟ್ರೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article