ಜ.18ರಂದು ವಿಶೇಷ ಮಕ್ಕಳ ಜಿಲ್ಲಾಮಟ್ಟದ "ಹೆಜ್ಜೆ ಸಂಭ್ರಮ" ನೃತ್ಯರೂಪಕ

ಜ.18ರಂದು ವಿಶೇಷ ಮಕ್ಕಳ ಜಿಲ್ಲಾಮಟ್ಟದ "ಹೆಜ್ಜೆ ಸಂಭ್ರಮ" ನೃತ್ಯರೂಪಕ

ಉಡುಪಿ: ಫಸ್ಟ್ ಸ್ಟೆಪ್ ನೃತ್ಯ ತರಬೇತಿ ಕೇಂದ್ರ ಕುಂದಾಪುರ ಇದರ ವತಿಯಿಂದ ಕನ್ನಡ ಮತ್ತು‌ ಸಂಸ್ಕೃತ ಇಲಾಖೆಯ‌ ಸಹಕಾರದೊಂದಿಗೆ ವಿಶೇಷ ಮಕ್ಕಳ ಪ್ರತಿಭೆಗಳ ಅನಾವರಣಕ್ಕಾಗಿ ನಡೆಯುವ ಸತತ ಮೂರನೇ ವರ್ಷದ ಜಿಲ್ಲಾಮಟ್ಟದ "ಹೆಜ್ಜೆ ಸಂಭ್ರಮ" ನೃತ್ಯ ರೂಪಕ ಇದೇ ಜ.18ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ  ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಅಕ್ಷತಾ ರಾವ್ ತಿಳಿಸಿದರು. 

ಈ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಶೇಷ ಶಾಲೆಯ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 16 ವಿಶೇಷ ಶಾಲೆಗಳ ಮಕ್ಕಳು ಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದರು. 

ಪ್ರತಿ ಶಾಲೆಯಿಂದ ಒಂದು ಮಗುವನ್ನು ಉತ್ತಮ ಬೆಳವಣಿಗೆ ಹೊಂದಿದ ಮಗು ಎಂದು ಗುರುತಿಸಿ, ಮಗುವಿಗೆ ಬೆಸ್ಟ್ ಡೆವೆಲಪ್ ಔಟ್ ಸ್ಟಾಡಿಂಗ್ ಚೈಲ್ಡ್ ಪುರಸ್ಕಾರ ನೀಡಲಾಗುವುದು. ವಿಶೇಷ ಮಕ್ಕಳಿಂದ ಬದುಕು ಬದಲಾಯಿಸುವ ಯಶೋಗಾಥೆಯ ಕಥಾ ನೃತ್ಯರೂಪಕ ಪ್ರದರ್ಶಗೊಳ್ಳಲಿದೆ. ಪ್ರಥಮ ಬಹುಮಾನ ₹ 22,201, ದ್ವಿತೀಯ ₹ 16,201, ತೃತೀಯ ₹ 11,201 ಮತ್ತು ಸಮಧಾನಕಾರ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಪ್ರಮುಖರಾದ ಸಂಧ್ಯಾ ರಮೇಶ್, ದಿನೇಶ್ ಅಮೀನ್, ಆನಂದ್ ಸುವರ್ಣ, ನಿಲೇಶ್ ಕಾಂಚನ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article