![ಕೇರಳದ ಮಲಪ್ಪುರಂನ ದೇಗುಲದ ಧಾರ್ಮಿಕ ಉತ್ಸವದ ವೇಳೆ ಆನೆ ದಾಳಿ; ಸೊಂಡಿಲಿನಿಂದ ವ್ಯಕ್ತಿಯನ್ನು ಬಿಸಾಡಿ ಆಕ್ರೋಶ-20ಕ್ಕೂ ಹೆಚ್ಚು ಮಂದಿಗೆ ಗಾಯ ಕೇರಳದ ಮಲಪ್ಪುರಂನ ದೇಗುಲದ ಧಾರ್ಮಿಕ ಉತ್ಸವದ ವೇಳೆ ಆನೆ ದಾಳಿ; ಸೊಂಡಿಲಿನಿಂದ ವ್ಯಕ್ತಿಯನ್ನು ಬಿಸಾಡಿ ಆಕ್ರೋಶ-20ಕ್ಕೂ ಹೆಚ್ಚು ಮಂದಿಗೆ ಗಾಯ](https://blogger.googleusercontent.com/img/b/R29vZ2xl/AVvXsEgft17Ahv1uM2nTm33m7GgjC9qbC75UZhDqOgwdz2ujTbQDBaNuWoiBKcq1h2jX1TOAvgSLUDTyMeliOXZc4amg0u5biPgvTa3BYwb3hVLWxQowHuIEkRJ1c39qAgs7a03ptaZNPMBEFrz4tuSwK6Rj68Q7fH9xmOHEyXWSO6pusEyT6algESiv7uprgGve/w640-h360/kerala.jpg)
ಕೇರಳದ ಮಲಪ್ಪುರಂನ ದೇಗುಲದ ಧಾರ್ಮಿಕ ಉತ್ಸವದ ವೇಳೆ ಆನೆ ದಾಳಿ; ಸೊಂಡಿಲಿನಿಂದ ವ್ಯಕ್ತಿಯನ್ನು ಬಿಸಾಡಿ ಆಕ್ರೋಶ-20ಕ್ಕೂ ಹೆಚ್ಚು ಮಂದಿಗೆ ಗಾಯ
ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದರ ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.
ಕೇರಳದ ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ಈ ಘಟನೆ ನಡೆದಿದ್ದು. ದೇಗುಲ ಉತ್ಸವಕ್ಕಾಗಿ ಸಿಂಗಾರಗೊಂಡು ನಿಂತಿದ್ದ ಆನೆಯೊಂದು ಏಕಾಏಕಿ ಆಕ್ರೋಶಗೊಂಡು ತನ್ನ ಮುಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದೆ.
ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ ಏಕಾಏಕಿ ಬಟ್ಟೆ ಒಗೆಯುವಂತೆ ನೆಲಕ್ಕೆ ಒಗೆದಿದೆ. ಬಳಿಕ ಅಲ್ಲಿ ನೆರೆದಿದ್ದ ಜನರತ್ತ ಆನೆ ನುಗ್ಗಿದ್ದು ಈ ವೇಳೆ ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದುತಿಳಿದುಬಂದಿದೆ.
ಮೂಲಗಳ ಪ್ರಕಾರ ಇಲ್ಲಿನ ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ಪಕ್ಕೋತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆಯು ದಿಢೀರ್ ಆಕ್ರೋಶಗೊಂಡು ದಾಳಿ ನಡೆಸಿದೆ. ಈ ಪೈಕಿ ಪಾಕತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.