ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರ.ಕಾರ್ಯದರ್ಶಿ ಇಬ್ರಾಹಿಂ CH, ಕೋಶಾಧಿಕಾರಿ ಜಮಾಲ್ ಮಣಿಪುರ ಆಯ್ಕೆ
ಕುವೈತ್: ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಇದರ 21ನೇ ವರ್ಷದ ಹಾಗೂ 2024ರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವು ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ಅವರ ಸಭಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಲ್ಮೀಯ ಸುನ್ನೀ ಸೆಂಟರ್'ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಫಿ ಕೃಷ್ಣಾಪುರ ಕಿರಾಅತ್ ಪಠಿಸಿ ಚಾಲನೆಯನ್ನು ನೀಡಿದರು. ವೇದಿಕೆಯಲ್ಲಿದ್ದ ಗಣ್ಯರಿಗೆ ಹೂ ಗುಚ್ಚೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯ ಅತಿಥಿಗಳನ್ನು ಇಮ್ತಿಯಾಜ್ ಸೂರಿಂಜೆ ಸಂಘದ ಪರವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಅಲ್ ಮದೀನ ಕುವೈತ್ ಕಮಿಟಿಯ ಅಧ್ಯಕ್ಷ ಶಾಹುಲ್ ಹಮೀದ್ ಸಅದಿ ನೆರವೇರಿಸಿದರು. 2024ರ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ CH ಮಂಡಿಸಿದರು. 2024 ರ ಲೆಕ್ಕವನ್ನು ಖಜಾಂಜಿ ಜಮಾಲ್ ಮಣಿಪುರ ಸಭೆಯ ಮುಂದಿಟ್ಟರು. ಸಂಘದ ಅಧ್ಯಕ್ಷ ಝುಬೈರ್ ಶಾಬಾನ್ ಸಂಘದ ಪರವಾಗಿ ಮಾತುಗಳನ್ನಾಡಿಸಿದರು.
ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ KKMA ಕರ್ನಾಟಕ ಬ್ರಾಂಚ್ ಮಾಜಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ರಿವಿವಲ್ ಇಸ್ಲಾಮಿಕ್ ಸೂಸೈಟಿ ಕುರ್ತುಬಾದ ಖತೀಬ್ ಶೈಖ್ ಮುಹಮ್ಮದ್ ಜಮಾಯಿ, KKMA ಅಧ್ಯಕ್ಷ ಅಬ್ದುಲ್ ರಹ್ಮಾನ್ ಖಾನ, ಕುವೈತ್ DKSC ಅಧ್ಯಕ್ಷ ಯೂಸುಫ್ ಮಂಚಕಲ್, KCF ಸಂಘಟನೆ ವಿಭಾಗ ಅಧ್ಯಕ್ಷ ಉಮರ್ ಝುಹ್ರಿ, ಆಸೀಫ್ ಮೈದೀನ್ ಬ್ಯಾರಿ BEC ಸೆಕ್ಯೂರಿಟಿ ಆಫೀಸರ್, ಇಂಟರ್ನ್ಯಾಷನಲ್ ಕೆಸಿಎಫ್ ಕೌನ್ಸಿಲರ್ ಹುಸೈನ್ ಎರ್ಮಾಡ್ ಉಪಸ್ಥಿತರಿದ್ದರು.
ಸಂಘದ ಸ್ಥಾಪನೆಗೆ ಶ್ರಮಿಸಿದ ಸ್ಥಾಪಕ ಸದಸ್ಯರಾದ ಅಬ್ದುಲ್ ರಹ್ಮಾನ್ ಅಲವಿ ಹಾಗೂ ಇಬ್ರಾಹಿಂ CH ರವರಿಗೆ ಮತ್ತು ಸಂಘಕ್ಕಾಗಿ ಉತ್ತಮ ಕಾರ್ಯನಿರ್ವಹಿಸಿದ ಸುಲೈಮಾನ್ ಉಚ್ಚಿಲ ಹಾಗೂ ಕುವೈಟ್'ನಲ್ಲಿ ನೆಲೆಸಿರುವ ಭಾರತೀಯ ಅನಿವಾಸಿಗಳ ಎಲ್ಲಾ ರೀತಿಯ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಸಹಕರಿಸುತ್ತಿದ್ದ ಅಬ್ದುಲ್ ರಹ್ಮಾನ್ ಖಾನ ಅವರನ್ನು ಈ ಸಂದರ್ಭದಲ್ಲಿ ಗೌರವ ಫಲಕ ನೀಡಿ ಗೌರವಿಸಲಾಯಿತು.
2025ರ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ CH, ಕೋಶಾಧಿಕಾರಿ ಜಮಾಲ್ ಮಣಿಪುರ ಹಾಗೂ 17 ಇತರ ಸದಸ್ಯರನ್ನಾಗಿ ನೇಮಿಸಲಾಯಿತು. ಅನ್ವರ್ ಕುಂಜಾಲ್ ರವರು ಸಂಘದ ಬಗ್ಗೆ ಸಭಿಕರ ಪರವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಕೊನೆಯದಾಗಿ ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಅವರು ನಮ್ಮ ಸಂಘದ ಕುರಿತು ಸವಿಸ್ತಾರವಾಗಿ ವಿವರಿಸಿದರು.
KFC ಕುವೈತ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ದುವಾ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಹೈದರ್ ಉಚ್ಚಿಲ ನಿರ್ವಹಿಸಿದರು. ಸಂಘದ ಲೆಕ್ಕ ಪರಿಶೋಧಕ ಸುಲೈಮಾನ್ ಉಚ್ಚಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸಂಘದ ಪರವಾಗಿ ಧನ್ಯವಾದ ಗೈದರು.