
ಕಾಪು: ಚಂದ್ರನಗರ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ
Thursday, February 27, 2025
ಕಾಪು: ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಇತ್ತೀಚಿಗೆ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಕುರಿತ "student led movement" ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಕ್ತದಾನದ ಮಹತ್ವ, ಪ್ಲಾಸ್ಟಿಕ್ ದುಷ್ಪರಿಣಾಮ, ಜಂಕ್ ಫುಡ್ ಗಳ ದುಷ್ಪರಿಣಾಮ, ಹೆಣ್ಣು ಮಕ್ಕಳ ಸುರಕ್ಷತೆ, ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಟ ಇತ್ಯಾದಿ ಹಲವು ವಿಷಯಗಳ ಬಗ್ಗೆ ಸಮುದಾಯ ಸಹಾಯ ಕೇಂದ್ರಗಳಾದ ಶಿರ್ವ ಆರಕ್ಷಕ ಠಾಣೆ, ಬ್ಯಾಂಕ್ ಆಫ್ ಬರೋಡ, ಸರಕಾರಿ ಆರೋಗ್ಯ ಕೇಂದ್ರ, ಕಾಪು ಕೆ.ಇ.ಬಿ, ಕಾಪು ಆರಕ್ಷಕ ಠಾಣೆ, ಕಾಪು ಅಂಚೆ ಕಛೇರಿ, ವಾಹನ ನಿರ್ವಾಹಕರು ಮತ್ಸ್ಯಗಂಧ, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೀಗೆ ಎಲ್ಲರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ವಿಷಯ ಪ್ರಸ್ತಾಪಿಸಿ ಜನಜಾಗೃತಿ ಮೂಡಿಸಿದರು.
ಜೊತೆಗೆ ವಿದ್ಯಾರ್ಥಿಗಳು ಬೆಳಪು, ಉಚ್ಚಿಲ, ಕಟ್ಪಾಡಿ, ಉದ್ಯಾವರ, ಕರಂದಾಡಿ ಮಜೂರು, ಶಿರ್ವ, ಕಾಪು ವಲಯ ಹೀಗೆ ಹಲವಾರು ಸಾರ್ವಜನಿಕ ಕೇಂದ್ರಗಳಲ್ಲಿನ ಜನರಲ್ಲಿ ವಿಶೇಷ ಅರಿವನ್ನು ಮೂಡಿಸಿ, ಹೀರೋಸ್ ಜೊತೆಗೆ ಒಂದು ದಿನ ಕಾರ್ಯಕ್ರಮದಡಿಯಲ್ಲಿ, ಪೊಲೀಸ್, ವೈದ್ಯರು, ಸಚಿವರು, ಅಂಚೆ ಕಚೇರಿ ಸಿಬ್ಬಂದಿ, ಬ್ಯಾಂಕ್ ಉದ್ಯೋಗಿಗಳು, ಬಸ್ ಚಾಲಕರು, ನಿರ್ವಾಹಕರು, ಪಿಡಿಒಗಳಿಗೆ ಸ್ಮರಣಿಕೆ ನೀಡಿ ಕೃತಜ್ಞತೆಯನ್ನು ಸಲ್ಲಿಸಿದರು.