ಎ.7ರಂದು ಮೂಳೂರು 'ಅಲ್ ಇಹ್ಸಾನ್' ಶಾಲಾ ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನೆ; ಪಾಲ್ಗೊಳ್ಳಲಿರುವ ಮೋಟಿವೇಶನ್ ಸ್ಪೀಕರ್ ಮುನಾವರ್ ಝಮಾ

ಎ.7ರಂದು ಮೂಳೂರು 'ಅಲ್ ಇಹ್ಸಾನ್' ಶಾಲಾ ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನೆ; ಪಾಲ್ಗೊಳ್ಳಲಿರುವ ಮೋಟಿವೇಶನ್ ಸ್ಪೀಕರ್ ಮುನಾವರ್ ಝಮಾ


ಉಚ್ಚಿಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮೋಟಿವೇಶನ್ ಸ್ಪೀಕರ್ ಮುನಾವರ್ ಝಮಾ ಅವರು ಎ. 7ರಂದು ಬೆಳಿಗ್ಗೆ 10 ಗಂಟೆಗೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮೂಳೂರಿನ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ನಲ್ಲಿ ನಡೆಯುವ ಶಾಲಾ ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್, ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ಉನ್ನತ ಶಿಕ್ಷಣ ಸಚಿವರಾದ ಡಾ ಎಮ್ ಸಿ ಸುಧಾಕರ್, ಪೌರಾಡಳಿತ ಸಚಿವರಾದ ರಹೀಂ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಮುನಾವರ್ ಝಮಾ ಹಾಗು ಶಾಸಕರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಯು ಕೆ ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article