
ಪೆಹಲ್ಗಾಮ್ ಉಗ್ರರ ದಾಳಿ ಖಂಡನೀಯ: ಅನ್ಸಾಫ್
ಬೆಂಗಳೂರು: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿದಂತೆ 26 ಮಂದಿ ಅಮಾಯಕ ಮುಗ್ಧ ಜನರು ಬಲಿಯಾಗಿದ್ದು ತೀವ್ರ ದುಃಖದ ವಿಚಾರ. ಇಂಥ ಹೀನ ಕೃತ್ಯವನ್ನು ಕಾಂಗ್ರೆಸ್ ಹಿರಿಯ ನಾಯಕ ಈಶ್ವರ್ ಖಂಡ್ರೆ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಕೆಪಿಸಿಸಿಯ ಯುವ ಸಂಘಟಕರಾದ ಅನ್ಸಾಫ್ ಖಂಡಿಸಿದ್ದಾರೆ.
ದೇಶವೇ ಶೋಕಾಚರಣೆಯಲ್ಲಿ ಮುಳುಗಿದೆ. ಛಪ್ಪನ್ ಇಂಚ್, ಲಾಲ್ ಆಂಕ್, ವಿಶ್ವಗುರು ಎಂದೆಲ್ಲಾ ಮಾತಾಡುವ ಮೋದಿಯವರು ಎಲ್ಲಾ ವೈಫಲ್ಯಗಳಿಗೆ ಮಾಜಿ ಪ್ರಧಾನಿ ನೆಹರು ಅವರನ್ನು ನೆನಯುತ್ತಾರೆ. ಇಂದು ನಾವು ಮೋದಿ ಅವರಿಗೆ ಹೇಳುತ್ತೇವೆ, ಅದೇ ನೆಹರೂ ಅವರ ಸುಪುತ್ರಿ ದೇಶಕ್ಕೋಸ್ಕರ ಪ್ರಾಣ ಕೊಟ್ಟಿರುವ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭಯೋತ್ಪಾದಕರ ವಿರುದ್ಧ ರಣಕಹಳೆ ಊದಿದ್ದನ್ನು ನೆನಪಿಸಿಕೊಂಡು ಭಯೋತ್ಪಾದನೆ ಪಿಡುಗಿನ ವಿರುದ್ದ ಸಮರ ಸಾರಲು ಭಾರತ ಸಜ್ಜು ಎಂಬ ಸಂದೇಶ ರವಾನೆ ಮಾಡಬೇಕು.
ಸಮಾಜದಲ್ಲಿ ಭೀತಿ, ದ್ವೇಷ ಹುಟ್ಟಿಸುವುದು, ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿಸುವುದರಿಂದ ಈ ಸಮಾಜ ಕಟ್ಟಲು ಸಾಧ್ಯವಿಲ್ಲಾ...ಇಂಥ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು , ಸಮಾಜದಲ್ಲಿ ಗೊಂದಲಕ್ಕೆ ಕಾರಣ ಆಗುವಂತಹ ಹೇಳಿಕೆ ನೀಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಅನ್ಸಾಫ್ ಮನವಿ ಮಾಡಿದ್ದಾರೆ..