
ಮಣಿಪುರ H۔M. ಹಿಪ್ಝುಲ್ ಕುರ್ ಆನ್ ಅಕಾಡೆಮಿಯಿಂದ 2025-26ರ ಸಾಲಿನ ದಾಖಲಾತಿ ಆರಂಭ
Wednesday, April 9, 2025
ಕಟಪಾಡಿ: ಉತ್ತಮ ಗುಣಮಟ್ಟದ ಲೌಕಿಕ ವಿದ್ಯಾಭ್ಯಾಸ, ಕಲಿಕಾ ಚಟುವಟಿಕೆ , ಮಾನಸಿಕ ಆಧ್ಯಾತ್ಮಿಕ ಬೆಳವಣಿಗೆಗೆ ಒತ್ತು ಕೊಡುವ ಶಿಕ್ಷಣ, ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ಪೂರ್ತಿ ಗೊಳಿಸಿ ಕುರ್ ಆನ್ ಹಾಫಿಝ್ ಬಿರುದನ್ನು ಪಡೆದುಕೊಳ್ಳುವ ಅವಕಾಶವನ್ನು ಉಡುಪಿ ಮಣಿಪುರದ H۔M. ಹಿಪ್ಝುಲ್ ಕುರ್ ಆನ್ ಅಕಾಡೆಮಿ ಕಲ್ಪಿಸಿದ್ದು, 2025-26ರ ಸಾಲಿನ ದಾಖಲಾತಿ ಆರಂಭಗೊಂಡಿದೆ.
H.M ಹಿಪ್ಝುಲ್ ಕುರ್ ಆನ್ ಅಕಾಡೆಮಿ ಮತ್ತು ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯು ಜಂಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.