
ಎರ್ಮಾಳು ಬಡಾ; ಮೋಗವೀರ ಸಭಾ ಸೇವಾ ಸಮಿತಿಯ ಸಭಾಗೃಹ ಮತ್ತು ಭೋಜನಾ ಶಾಲಾ ಶಿಲಾನ್ಯಾಸ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ
Friday, May 30, 2025
ಎರ್ಮಾಳು ಬಡಾ ಮೋಗವೀರ ಸಭಾ ಸೇವಾ ಸಮಿತಿಯ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾಗೃಹ ಮತ್ತು ಭೋಜನಾ ಶಾಲಾ ಶಿಲಾನ್ಯಾಸ ಸಮಾರಂಭದಲ್ಲಿ ಶುಕ್ರವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ ಶಂಕರ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ್ ಆಳ್ವ, ನೂತನ ಸಭಾಗೃಹ ಮತ್ತು ಭೋಜನಾ ಶಾಲಾ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾದ ಶೇಖರ ಆರ್ ಸಾಲ್ಯಾನ್, ದಕ್ಷಿಣ ಕನ್ನಡ ಮೋಗವೀರ ಮಹಾಜನ ಸಂಘ (ರಿ.) ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವ ಕುಮಾರ್ ಮೆಂಡನ್ ಹಾಗೂ ಗಣ್ಯರು ಉಪಸ್ಥಿತರಿದ್ದರು.