
ನಾಳೆ ಅಲಯನ್ಸ್ ಇಂಟರ್ನ್ಯಾಶನಲ್ ಉಡುಪಿ ಡಿಸ್ಟ್ರಿಕ್ಟ್ ಪದಗ್ರಹಣ ಸಮಾರಂಭ
ಉಡುಪಿ: ಭಾರತೀಯ ಮೂಲದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಅಸೋಸಿಯೇಶನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಪೊಡವಿಗೊಡೆಯ ಶ್ರೀ ಕೃಷ್ಣನ ನಾಡು ಉಡುಪಿ ಜಿಲ್ಲೆಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಉಡುಪಿ ಅಲಯನ್ಸ್ ಡಿಸ್ಟ್ರಿಕ್ಟ್ 275ರ ಪದಗ್ರಹಣ ಕಾರ್ಯಕ್ರಮ 'ಅನುಪಮಾ' ನಾಳೆ (ಜೂ. 29) ಕಡಿಯಾಳಿ ಓಶಿಯನ್ ಪರ್ಲ್ ಹೋಟೆಲಿನಲ್ಲಿ ನಡೆಯಲಿದೆ ಎಂದು ಉಡುಪಿ ಅಲಯನ್ಸ್ ಡಿಸ್ಟ್ರಿಕ್ಟ್ 275 ರ ಸ್ಥಾಪಕ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್ ಕಡೆಕಾರ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಅಲಯನ್ಸ್ ಡಿಸ್ಟ್ರಿಕ್ಟ್ 275ರ ಸ್ಥಾಪಕ ಜಿಲ್ಲಾ ಗವರ್ನರ್ ಆಗಿ ನಾನು ಆಯ್ಕೆಗೊಂಡಿದ್ದೇನೆ. ಉಳಿದಂತೆ ಪ್ರಥಮ ಉಪ ಜಿಲ್ಲಾ ಗವರ್ನರ್ ಆಗಿ ಸುನೀಲ್ ಕುಮಾರ್ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಆಗಿ ಸುಧಾಕರ್ ಹೆಗ್ಡೆ ನೇಮಕಗೊಂಡಿದ್ದಾರೆ ಎಂದರು.
ಡಾ ಅನುಪಮಾ ಸುನೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಅಲಯನ್ಸ್ ಅಂತರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಕುಮಾರ್ ಸಕ್ಸೇನಾ, ಸ್ಥಾಪಕರಾದ ತಿರುಪತಿ ರಾಜು, ಪ್ರಥಮ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಿ. ಬಿ. ಶಾಸ್ತ್ರಿ, ತೃತೀಯ ಅಂತರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ವರ್ ರಾವ್, ಅಂತರಾಷ್ಟ್ರೀಯ ನಿರ್ದೇಶಕ ನಾಗರಾಜ್ ಬಾಯರಿ, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಸಲಹೆಗಾರರಾದ ಶ್ರೀಧರ ಶೇಣವ, ಡಾ ತಲ್ಲೂರು ಶಿವರಾಮ ಶೆಟ್ಟಿ, ಸಂಪುಟ ಕಾರ್ಯದರ್ಶಿ ಡಾ ಜಗದೀಶ್ ಹೊಳ್ಳ , ಸಂಪುಟ ಖಜಾಂಚಿ ರಮಾನಂದ ಶೆಟ್ಟಿಗಾರ್, ಪ್ರಾಂತ್ಯಾಧ್ಯಕ್ಷ ಡಾ ಅಶೋಕ್ ಕುಮಾರ್ ವೈಜಿ, ವಲಯಾಧ್ಯಕ್ಷ ಡಾ ಸಂತೋಷ ಕುಮಾರ್ ಬೈಲೂರು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.