
ಇಂದ್ರಾಳಿ ಪ್ರಗತಿ ಯುವಕ-ಮಹಿಳಾ ಮಂಡಳಿಯಿಂದ ನಡೆದ "ಕೆಸರ್ದ ಗೊಬ್ಬುಲು"
Thursday, July 24, 2025
ಉಡುಪಿ: ಇಲ್ಲಿನ ಇಂದ್ರಾಳಿ ಪ್ರಗತಿ ಯುವಕ ಸಂಘ (ರಿ), ಪ್ರಗತಿ ಮಹಿಳಾ ಮಂಡಳಿ (ರಿ) ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸತತ 5ನೇ ವರ್ಷಗಳಿಂದ ನಡೆಯುತ್ತಿರುವ ತುಳುನಾಡಿನ ಜಾನಪದ ಕ್ರೀಡೆ ಹಾಗೂ ಇನ್ನಿತರ ಕ್ರೀಡೆಗಳ ಸಮ್ಮಿಲನ ಕಾರ್ಯಕ್ರಮ "ಕೆಸರ್ದ ಗೊಬ್ಬುಲು" ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿಯಿರುವ ಗದ್ದೆಯಲ್ಲಿ ರವಿವಾರ ನಡೆಯಿತು.
ಪ್ರಗತಿ ಯುವಕ ಸಂಘ (ರಿ.) ಹಾಗು ಪ್ರಗತಿ ಮಹಿಳಾ ಮಂಡಳಿ (ರಿ.) ಇಂದ್ರಾಳಿ ಇದರ ಗೌರವಾಧ್ಯಕ್ಷರು, ಕಾಂಗ್ರೆಸ್ ಪಕ್ಷದ ನಾಯಕರಾದ ಕುಶಲ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಶೇಕ್ ವಾಹಿದ್ ದಾವುದ್ ಸೇರಿದಂತೆ ಹಲವರು ಭಾಗವಾಹ್ಸಿದ್ದರು.
ಕೆಸರುಗದ್ದೆಯಲ್ಲಿ ಶಾಲಾ ಮಕ್ಕಳಿಗೆ ಓಟ ಹಾಗೂ ಹಿಮ್ಮುಖ ಓಟ, ಜೋಡಿ ಕಾಲಿನ ಓಟ, ಪುರುಷರಿಗೆ-ಮಹಿಳೆಯರಿಗೆ ಪಾಲೆ ಓಟ, ರಿಲೇ, ಪಿರಮಿಡ್, ಮಡಕೆ ಒಡೆಯುವ ಸ್ಪರ್ಧೆ, ವಾಲಿಬಾಲ್-ತ್ರೋಬಾಲ್, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡರು.