
ಉದ್ಯಾವರ ಪರಿಸರ ಸಂರಕ್ಷಣಾ ಸಮಿತಿಯಿಂದ ಸರ್ಕಾರಿ ಶಾಲೆಯಲ್ಲಿ ಫಲ ಪುಷ್ಪ ಗಿಡಗಳ ವಿತರಣೆ; ಡಾ.ಶೇಕ್ ವಾಹಿದ್ ಸೇರಿದಂತೆ ಹಲವು ಗಣ್ಯರು ಭಾಗಿ
ಉದ್ಯಾವರ: ಇಲ್ಲಿನ ಪರಿಸರ ಸಂರಕ್ಷಣಾ ಸಮಿತಿ(ರಿ) ವತಿಯಿಂದ ಉದ್ಯಾವರ ಬೋಳಾರು ಗುಡ್ಡೆ ಸರ್ಕಾರಿ ಶಾಲೆಯಲ್ಲಿ ಫಲ ಪುಷ್ಪ ಗಿಡಗಳ ವಿತರಣ ಕಾರ್ಯಕ್ರಮವು ನೆರವೇರಿತು.
ಈ ಕಾರ್ಯಕ್ರಮದಲ್ಲಿ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಕೇಶವ ಪೂಜಾರಿ ಮುಖ್ಯ ಅತಿಥಿಗಳಾಗಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ ಗಿಡಮರಗಳ ಬೆಳೆಸುವಿಕೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಡಾ.ಶೇಕ್ ವಾಹಿದ್ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯರಾದ ರೋಯ್ಸ್ ಫೆರ್ನಾಂಡಿಸ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸಂತೋಷ್ ಕುಮಾರ್ ಬೊಲ್ಜೆ ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿಯಾದ ಮುಕಾಂಬಿಕೆ, ಶಿಕ್ಷಕರಕ್ಷಕ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಉದ್ಯಾವರ ಮಹಿಳಾ ಮಂಡಳಿ ಅಧ್ಯಕ್ಷೆಯಾದ ಹೆಲನ್ ಫೆರ್ನಾಂಡಿಸ್, ಕಾರ್ಯದರ್ಶಿ ಜ್ಯೋತಿ ಆನಂದ್ , ಕಿಸಾನ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್, ಉದ್ಯಾವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಚಂದ್ರವತಿ ಬಂಡಾರಿ ಹಾಗೂ ಸುಗಂಧಿ ಶೇಖರ್ ಕಾರ್ಯಕ್ರಮದಲ್ಲಿದ್ದರು.
ಪರಿಸರ ಸಂರಕ್ಷಣೆ ಸಮಿತಿ ಅಧ್ಯಕ್ಷರಾದ ಶೇಖರ್ ಕೆ ಕೋಟ್ಯಾನ್ ಸ್ವಾಗತಿಸಿದರು. ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವನಾಥ್ ಪಿತ್ರೋಡಿ ಧನ್ಯವಾದಗೈದರು.
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೇ ರಾಂಕ್ ಪಡೆದ ಶಾಲಾ ವಿದ್ಯಾರ್ಥಿ ಜಯದೀಪ್ ಪೂಜಾರಿಯನ್ನು ಈ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಇರುವ ಯಾವುದೇ ಕಸವನ್ನು ರಸ್ತೆ ಅಥವಾ ನದಿಗೆ ಬಿಸಾಡುವುದಿಲ್ಲ ಎಂಬ ಪ್ರಮಾಣವನ್ನು ಈ ಸಂದರ್ಭದಲ್ಲಿ ಮಾಡಿಸಲಾಯಿತು.