ಚೊಕ್ಕಬೆಟ್ಟು ಜಾಮಿಯಾ ಇಂಗ್ಲಿಷ್ ಮೀಡಿಯಂ ಶಾಲೆ- ಪಿಯು ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಚೊಕ್ಕಬೆಟ್ಟು ಜಾಮಿಯಾ ಇಂಗ್ಲಿಷ್ ಮೀಡಿಯಂ ಶಾಲೆ- ಪಿಯು ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಸುರತ್ಕಲ್: ಇಲ್ಲಿನ ಚೊಕ್ಕಬೆಟ್ಟು ಜಾಮಿಯಾ ಇಂಗ್ಲಿಷ್ ಮೀಡಿಯಂ ಶಾಲೆ ಹಾಗು ಪಿಯು ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಚೊಕ್ಕಬೆಟ್ಟು ಜಾಮಿಯಾ ಶೈಕ್ಷಣಿಕ ಆಡಳಿತ ಮಂಡಳಿ ಅಧ್ಯಕ್ಷ ಜನಾಬ್ ಶಂಸುದ್ದೀನ್ ಐ.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೊಕ್ಕಬೆಟ್ಟು ತಣ್ಣೀರುಬಾವಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಅಬ್ದುಲ್ ಅಝೀಝ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 
ಶಾಲೆಯ ವಿದ್ಯಾರ್ಥಿಗಳ ವಿವಿಧ ತಂಡಗಳಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗು ಮಸೀದಿಯ ಅಧ್ಯಕ್ಷರು ಜೊತೆ ಸೇರಿ ಧ್ವಜಾರೋಹಣಗೈದರು.

ಚೊಕ್ಕಬೆಟ್ಟು ತಣ್ಣೀರುಬಾವಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ದುವಾ ನೆರವೇರಿಸಿ ಮಾತನಾಡಿ, ದೇಶಾಭಿಮಾನವನ್ನು ಮಕ್ಕಳು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಅರಿವು ಮೂಡಿಸಿದರು. ಚೊಕ್ಕಬೆಟ್ಟು ಜಾಮಿಯಾ ಶೈಕ್ಷಣಿಕ ಆಡಳಿತ ಮಂಡಳಿ ಉಪಾಧ್ಯಕ್ಷ ಜನಾಬ್ ಮೊಯಿದಿನಬ್ಬ ಬಜ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಜನಾಬ್ ಅಬೂಬಕ್ಕರ್ ಐ.ಯು. ಅವರು ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೋಬಳಿ ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಬಾಲಕಿಯರ ತಂಡವನ್ನು ಹಾಗು ಇತರ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ತಿಗಳು ರಾಷ್ಟ್ರ ನಾಯಕ, ನಾಯಕಿಯರ ವೇಷಭೂಷಣದೊಂದಿಗೆ ಸಭಿಕರನ್ನು ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಜಾಮಿಯಾ ಶೈಕ್ಷಣಿಕ ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ತಣ್ಣೀರುಬಾವಿ ಮೋಹಿಯುದ್ದೀನ್ ಜುಮ್ಮಾ ಮಸ್ಜಿದ್ ನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪಿಟಿಎ ಅಧ್ಯಕ್ಷರು, ಪದಾಧಿಕಾರಿಗಳು, ಮಕ್ಕಳ ಪೋಷಕರು ಭಾಗವಹಿಸಿದ್ದರು. 
9ನೇ ತರಗತಿ ವಿದ್ಯಾರ್ಥಿನಿ ಆಮಿನಾ ಝಯಾನ್ ಸ್ವಾಗತಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಆಸ್ಯ ಆಯಿಶತು ರಝ್ವ ವಂದಿಸಿದರು. 10ನೇ ತರಗತಿ ವಿದ್ಯಾರ್ಥಿನಿ ನೂರ್ಜಹಾನ್ ಅಝೀಮ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article