ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಆರೋಪ; ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಆರೋಪ; ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣ ದಾಖಲು

ಬೆಳ್ತಂಗಡಿ; ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಬಗ್ಗೆ ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಹುಬ್ಬಳ್ಳಿ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ ಎಂಬವರು ದೂರು ನೀಡಿದ್ದು, ಗಿರೀಶ್ ಮಟ್ಟಣ್ಣನವರ್ ಕುಡ್ಲ ರಾಂ ಪೇಜ್ ಗೆ ನೀಡಿದ ಸಂದರ್ಶನದಲ್ಲಿ ಜೈನರ ಬಗ್ಗೆ ತುಚ್ಚವಾಗಿ ಮಾತನಾಡಿರುವುದಾಗಿ ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂ ಪೇಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅದೇ ರೀತಿ ಬೆಳ್ತಂಗಡಿ ನಿವಾಸಿ ವಿಜಯ ಎಂಬವರ ದೂರಿನಂತೆ ವಿಕಾಸ್ ವಿಕ್ಕಿ ಹಿಂದು ಎಂಬ ಫೇಸ್ ಬುಕ್ ಪೇಜ್ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಧನಂಜಯ ಜೈನ್ ಎಂಬವರ ದೂರಿನಂತೆ ಏನ್ರಿ ಗೌಡ್ರೆ ಎಂಬ ಫೇಸ್ ಬುಕ್ ಪೇಜ್ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಭಾಕರ ಗೌಡ ಎಂಬವರ ದೂರಿನಂತೆ ಲಾಯರ್ ಜಗದೀಶ್ ಸಾರ್ವಜನಿಕರಿಗೆ ದುಷ್ಪ್ರೇರಣೆ ಉಂಟು ಮಾಡುವ ಸಂದೇಶ ನೀಡಿದ್ದಲ್ಲದೆ ಅಪರಾಧ ಎಸಗಲು ಪ್ರೇರಣೆ ನೀಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಭಾಕರ ಗೌಡ ಎಂಬವರ ದೂರಿನಂತೆ ಲೋಕೇಶ್ ಪೂಜಾರಿ ಎಂಬಾತನ ವಿರುದ್ಧ ದೂರು ನೀಡಿದ್ದು ಸಮುದಾಯಗಳ ನಡುವೆ ವೈಮನಸ್ಸು ಉಂಟಾಗುವಂತಹ ಫೋಸ್ಟ್ ಹಾಕಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ನಿವಾಸಿ ಉದಯ ಪೂಜಾರಿ ಎಂಬವರ ದೂರಿನಂತೆ ನವೀನ್ ಜೈನ್ ಎಂಬಾತನ ವಿರುದ್ಧ ಯೂಟ್ಯೂಬ್ ನಲ್ಲಿ ಅಪರಾಧ ನಡೆಸಲು ಪ್ರೇರಣೆಯಾಗುವ ಸಂದೇಶಗಳನ್ನು ಹಂಚಿರುವುದಾಗಿ ಆರೋಪಿಸಿ ದೂರು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article