ಜಮೀಯ್ಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು ಆಯ್ಕೆ

ಜಮೀಯ್ಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು ಆಯ್ಕೆ

ಕಾರ್ಕಳ: ಜಮೀಯ್ಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ 2024-25ನೇ ಸಾಲಿನ ಮಹಾಸಭೆಯು  ಗುರುವಾರ ಕಾರ್ಕಳ ಸಾಲ್ಮರ ಜಾಮಿಯಾ ಮಸ್ಜಿದ್ ಕಾಂಪ್ಲೆಕ್ಸ್'ನಲ್ಲಿರುವ  ಜಮೀಯ್ಯತುಲ್ ಫಲಾಹ್ ಕಛೇರಿಯಲ್ಲಿ ಅಧ್ಯಕ್ಷರಾದ ಅಷ್ಪಾಕ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಕೇಂದ್ರ ಘಟಕದಿಂದ ನೇಮಿಸಲ್ಪಟ್ಟ ವೀಕ್ಷಕರಾಗಿ ಕಾಪು ತಾಲೂಕು ಘಟಕದ ಅಧ್ಯಕ್ಷ ಸಬಿಹ್ ಅಹ್ಮದ್ ಖಾಝಿಯವರು ಮಹಾಸಭೆಯಲ್ಲಿ ಭಾಗವಹಿಸಿ ಸದಸ್ಯರಿಗೆ ಜಮೀಯತುಲ್ ಫಲಹ್ ದ ನೂತನ ಕಾರ್ಯಕಾರಿ ಸಮಿತಿ ರಚನೆ ಬಗ್ಗೆ ಸೂಕ್ತ ಮಾಹಿತಿ, ಸಂವಿಧಾನದ ಬಗೆಗಿನ ಅರಿವು ಮೂಡಿಸಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ನಿರ್ಗಮನ ಅಧ್ಯಕ್ಷರಾದ ಅಷ್ಪಾಕ್ ಅಹ್ಮದ್ ಸ್ವಾಗತಿಸಿದರು. ಕೆ ಎಸ್ ಮೊಹಮ್ಮದ್ ಖಾಸಿಂ ಅಂಚಿಕಟ್ಟೆ ಖಿರಾತ್ ಪಠಿಸಿದರು. ಕಾರ್ಯದರ್ಶಿ ಸಯ್ಯದ್ ಅಬ್ಬಾಸ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಮೊಹಮ್ಮದ್ ಯಾಕೂಬ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದ್ದು, ಸಭೆ ಅನುಮೋದಿಸಿತು.

2025-27 ಸಾಲಿನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು, ಕಾರ್ಯದರ್ಶಿಯಾಗಿ ಅಷ್ಪಕ್ ಅಹ್ಮದ್ ಜೋಡುರಸ್ತೆ, ಕೋಶಾಧಿಕಾರಿಯಾಗಿ ಮೊಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಉಪಾಧ್ಯಕ್ಷರಾಗಿ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಜತೆ ಕಾರ್ಯದರ್ಶಿಯಾಗಿ ನಾಸಿರ್ ಶೇಕ್ ಬೈಲೂರು, ಸಂಘಟನಾ ಕಾರ್ಯದರ್ಶಿಯಾಗಿ ಸಯ್ಯದ್ ಹಸನ್ ಗಾಂಧಿಮೈದಾನ್, ಪತ್ರಿಕಾ ಕಾರ್ಯದರ್ಶಿಯಾಗಿ ಕೆ ಎಂ ಖಲೀಲ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಾಸಿರ್ ನವಿದ್ ಶೇಕ್ ಕಾಬೆಟ್ಟು, ಸಮದ್ ಖಾನ್ ಇರ್ವತೂರ್, ಕೆ ಎಸ್ ಎಂ ಕಾಸಿಮ್, ಸಯ್ಯದ್ ಅಹ್ಮದ್ (ಲಾಲು)ಕಾಬೆಟ್ಟು, ಅಮೀರ್ ಹುಸೇನ್ ಕರಿಯಕಲ್ಲು, ಮೊಹಮ್ಮದ್ ಹುಸೇನ್ ಬಂಡಿಮಠ, ಅಬ್ದುಲ್ಲಾ ಅದಂ ಶೇಕ್ ಬೈಪಾಸ್,  ಮೊಹಮ್ಮದ್ ಯಾಕೂಬ್ ಕಾಬೆಟ್ಟು, ಅಬ್ದುಲ್ ಮಜೀದ್ ತೆಲ್ಲಾರ್, ಮೊಹಮ್ಮದ್ ಹಸನ್ ಸಾಹೇಬ್ ನಿಟ್ಟೆ, ಮೊಹಮ್ಮದ್ ಸಾಹೇಬ್, ಇಜಾಜ್ ಶರೀಫ್ ಸಾಲ್ಮರ, ಇಕ್ಬಾಲ್ ಸುಲೈಮಾನ್ ಸೇಠ್, ಇವರನ್ನು ಆಯ್ಕೆ ಮಾಡಲಾಯಿತು.

Ads on article

Advertise in articles 1

advertising articles 2

Advertise under the article