ಉಡುಪಿ: ಆ.4ರಂದು ವಿಶೇಷ ಜಿಎಸ್ ಟಿ ಜಾಗೃತಿ ಕಾರ್ಯಕ್ರಮ

ಉಡುಪಿ: ಆ.4ರಂದು ವಿಶೇಷ ಜಿಎಸ್ ಟಿ ಜಾಗೃತಿ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆ ಹಾಗೂ ದಿ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಜಂಟಿ ಆಶ್ರಯದಲ್ಲಿ ವಿಶೇಷ (ಜಿಎಸ್ ಟಿ) ಜಾಗೃತಿ ಕಾರ್ಯಕ್ರಮವನ್ನು ಇದೇ ಆ.4ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ಅಜ್ಜರಕಾಡಿನ ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಆನಂದ್ ಕಾರ್ನಾಡ್ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರದ GST ನೋಂದಣಿ ಹಾಗೂ ತೆರಿಗೆಗೆ ಸಂಬಂಧಿಸಿದ ಸ್ಪಷ್ಟ ಅಧಿಸೂಚನೆಯ ಮೇರೆಗೆ ಅನೇಕ ವರ್ತಕರು, ಉದ್ಯಮಿಗಳು ಹಾಗೂ ಸಣ್ಣ ವ್ಯವಹಾರಸ್ಥರು ಲಕ್ಷಾಂತರ ರೂಪಾಯಿಗಳ ತೆರಿಗೆ ಬಾಕಿ ಎಂಬ ನೋಟೀಸ್ ಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಪ್ರಯುಕ್ತ ಈ ನೋಟೀಸ್‌ಗಳಿಗೆ ಸರಿಯಾಗಿ ಪ್ರತಿಕ್ರಿಯಿಸುವ ಮಾರ್ಗದರ್ಶಿ, GST ನಿಯಮಗಳು, ಫೈಲಿಂಗ್ ಭಾದ್ಯತೆಗಳು, ಸ್ಪಷ್ಟ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಹಿರಿಯ GST ಅಧಿಕಾರಿಗಳು ಭಾಗಿಯಾಗಲಿರುವ ಈ 2 ಗಂಟೆಗಳ ಕಾರ್ಯಕ್ರಮದಲ್ಲಿ ವರ್ತಕರು ಮತ್ತು ಇತರ ಉದ್ಯಮಿಗಳಿಗೆ ಉಪಯುಕ್ತ ಮಾರ್ಗದರ್ಶಿ ಹಾಗೂ ಸಂದೇಹ ನಿವಾರಣೆಗಾಗಿ ಸಂವಾದ ನಡೆಯಲಿದೆ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಓಸ್ವಾಲ್ಡ್ ಸಲ್ದಾನಾ, ಜೊತೆ ಕಾರ್ಯದರ್ಶಿ ರಶಿತ್, ಉಪಾಧ್ಯಕ್ಷ ಮ್ಯಾಕ್ಸಿಂ ಸಲ್ದಾನಾ ಇದ್ದರು.

Ads on article

Advertise in articles 1

advertising articles 2

Advertise under the article