
ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶ ನಿರ್ಬಂಧ; ವಾಹನ ತಡೆದು ನೋಟೀಸ್ ನೀಡಿದ ಪೊಲೀಸರು
Wednesday, August 13, 2025
ಸಕಲೇಶಪುರ: ಹಿಂದೂ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಆಗಮಿಸಲು ಮುಂದಾಗಿದ್ದ ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.
ಹಾಸನದ ಶಾಂತಿ ಗ್ರಾಮದ ಬಳಿ ಪೊಲೀಸರು ಪುನೀತ್ ಕೆರೆಹಳ್ಳಿಯ ವಾಹನವನ್ನು ತಡೆದು ನೋಟೀಸ್ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ಕ್ರಮ ಜಾರಿಗೆ ಬಂದಿದ್ದು, ಅಶಾಂತಿ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.