ಪಶ್ಚಿಮಘಟ್ಟ–ನಮ್ಮ ಹೆಮ್ಮೆ, ನಮ್ಮ ಹೊಣೆಗಾರಿಕೆ; ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಸಮಿತಿಯು ರೂಪಿಸಿರುವ ಫಲಕವನ್ನು ಅನಾವರಣಗೊಳಿಸಿದ ಸಚಿವ ಈಶ್ವರ್ ಖಂಡ್ರೆ
Thursday, August 14, 2025
ಬೆಂಗಳೂರು: ಜೀವವೈವಿಧ್ಯತೆಯ ತಾಣವಾಗಿರುವ 325ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಪ್ರಭೇದಗಳ ಆವಾಸಸ್ಥಾನವಾದ ಪಶ್ಚಿಮಘಟ್ಟ ಸಂರಕ್ಷಣೆಯ ಮಹತ್ವವನ್ನು ಜನರಲ್ಲಿ ಜಾಗೃತಿಗೊಳಿಸಲು ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಸಮಿತಿಯು ರೂಪಿಸಿರುವ ಫಲಕವನ್ನು ಗುರುವಾರ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅನಾವರಣಗೊಳಿಸಿದರು.
ಪಶ್ಚಿಮಘಟ್ಟ ಕೇವಲ ಬೆಟ್ಟವಲ್ಲ, ಅದು ನಮ್ಮ ಪರಿಸರ, ನಮ್ಮ ನದಿಗಳು ಮತ್ತು ನಮ್ಮ ಮುಂದಿನ ಪೀಳಿಗೆಯ ಜೀವಾಳ. ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಈ ವೇಳೆ ತಿಳಿಸಿದರು.