ಲಾಡ್ಜ್‌ನಲ್ಲಿ ಮಹಿಳೆಯ ಬಾಯಿಗೆ 'ಜಿಲೆಟಿನ್ ಕಡ್ಡಿ' ಇಟ್ಟು ಸ್ಪೋಟಿಸಿ ಹತ್ಯೆ ಮಾಡಿದ ಪ್ರಿಯಕರ!

ಲಾಡ್ಜ್‌ನಲ್ಲಿ ಮಹಿಳೆಯ ಬಾಯಿಗೆ 'ಜಿಲೆಟಿನ್ ಕಡ್ಡಿ' ಇಟ್ಟು ಸ್ಪೋಟಿಸಿ ಹತ್ಯೆ ಮಾಡಿದ ಪ್ರಿಯಕರ!

ಮೈಸೂರು: ಮೈಸೂರಿನ ಸಾಲಿಗ್ರಾಮನ ಭೇರ್ಯ ಗ್ರಾಮದ ಲಾಡ್ಜ್‌ವೊಂದರಲ್ಲಿ 20 ವರ್ಷದ ವಿವಾಹಿತ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದು ಪ್ರಿಯಕರನೇ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಗೆರಸನಹಳ್ಳಿ ಗ್ರಾಮದ ರಕ್ಷಿತಾ ಎಂದು ಗುರುತಿಸಲಾಗಿದೆ. ಪ್ರಿಯಕರ ಸಿದ್ದರಾಜು ಎಂಬಾತ ರಕ್ಷಿತಾ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಂದಿರುವುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಸಾಲಿಗ್ರಾಮದ ಪೊಲೀಸರು ಸಿದ್ದರಾಜುನನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಯುವಕನನ್ನು ರಕ್ಷಿತಾ ಮದುವೆಯಾಗಿದ್ದರೂ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಸಿದ್ದರಾಜು ರಕ್ಷಿತಾಳನ್ನು ಕರೆಸಿಕೊಂಡಿದ್ದಾನೆ. ನಂತರ ಲಾಡ್ಜ್ ಗೆ ಕರೆದುಕೊಂಡು ಹೋಗಿ ಸಿದ್ದರಾಜು ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಲೆ ಮಾಡಿ ನಂತರ ಸಿದ್ದರಾಜು ಮೊದಲು ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದನು. 

ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಲಾಡ್ಜ್‌ ಸಿಬ್ಬಂದಿಗೆ ಅನುಮಾನ ಬಂದಿತ್ತು. ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿ ಪರಾರಿಯಾಗಲು ಯತ್ನಿಸಿದ್ದ. ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಬಳಿ ಅಸಲಿ ವಿಷಯವನ್ನು ಸಿದ್ದರಾಜು ಹೇಳಿದ್ದಾನೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article