
ಟೀಮ್ ಖಂಡ್ರೆ ವಿದ್ ಇಂಟಿಗ್ರಿಟಿಯ ಧಾರವಾಡ ಜಿಲ್ಲಾ ಸಂಚಾಲಕರಾಗಿ ಟೆಕ್ಕಿ ನಾಝಿಮ್ ಸರ್ದೇಸಾಯಿ ನೇಮಕ
Friday, August 15, 2025
ನಾಝೀಮ್ ಸರ್ದೇಸಾಯಿರವರು ಧಾರವಾಡದ ಪ್ರತಿಷ್ಠಿತ ಸರ್ದೇಸಾಯಿ ವಂಶದ ಸದಸ್ಯರಾಗಿದ್ದು, ಬಿ ಇ ಪದವಿಧರ. ಪ್ರತಿಷ್ಠಿತ ಐಟಿ ಕಂಪೆನಿಯ ಉದ್ಯೋಗಿ ಆಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡಿನ ಲಂಡನ್ ಗೆ ನಿಕಟ ಆಗಿರುವ ರೆಡ್ಡಿಂಗ್ ಸಿಟಿಯಲ್ಲಿ ಪ್ರಾಜೇಕ್ಟ್ ಪೂರ್ತಿಗೊಳಿಸಿ ಬಂದಿರುವ ಇವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಶುಭ್ರ ಆಡಳಿತ ವೈಖರಿ ಮೆಚ್ಚಿ ಖಂಡ್ರೆ ಅವರ ಸಮರ್ಥಕರ ಸಂಘಟನೆಯಾದ ಎ.ಕೆ.ಅನ್ಸಾಫ್ ಅವರು ಸ್ಥಾಪಿಸಿರುವ ಟೀಂ ಖಂಡ್ರೆ ವಿದ್ ಇಂಟಿಗ್ರಿಟಿಗೆ ಸೇರುವ ಮೂಲಕ ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಳ್ಳಲು ಅಣಿಯಾಗಿದ್ದಾರೆ. ಟೀಂ ಖಂಡ್ರೆ ವಿದ್ ಇಂಟಿಗ್ರಿಟಿಯ ಸ್ಥಾಪಕ ಅಧ್ಯಕ್ಷರಾದ ಎ ಕೆ ಅನ್ಸಾಫ್ ಅವರು ನಾಝಿಮ್ ಸರ್ದೇಸಾಯಿ ಅವರ ಸಾಮಾಜಿಕ ರಂಗದ ಪಯಣಕ್ಕೆ ಶುಭ ಹಾರೈಸಿದ್ದಾರೆ.