ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್'ಗಢಿ ಅವರ ಹುಟ್ಟುಹಬ್ಬವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಶೇಕ್ ವಾಹಿದ್ ದಾವೂದ್ ಅವರು ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ದಿನಸಿ ವಸ್ತುಗಳನ್ನು ವಿತರಣೆ ಮಾಡುವುದರ ಮೂಲಕವಾಗಿ ಆಚರಿಸಿದರು. ಈ ವೇಳೆ ಅವರೊಂದಿಗೆ ಮೌಲಾನಾ ಅಬ್ದುಲ್ ಹಫೀಜ್ ಕಾರ್ಕಳ, ಅಬ್ಬಾಸ್ ಸಾಹೇಬ್ ಕಾರ್ಕಳ ಹಾಗು ಉದ್ಯಮಿ ಮೊಹಮ್ಮದ್ ಸಾದಿಕ್ ಉಡುಪಿ ಉಪಸ್ಥಿತರಿದ್ದರು.





