ಸುರತ್ಕಲ್‌ನ ಕೃಷ್ಣಾಪುರದಲ್ಲಿ ಇಂದು 'ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್'ನ ನೂತನ ಚಿನ್ನದ ಮಳಿಗೆ ಶುಭಾರಂಭ;
ಏನೆಲ್ಲಾ ಭರ್ಜರಿ ಆಫರ್ ನೀಡಲಾಗಿದೆ ನೋಡಿ......!
ಸುರತ್ಕಲ್: ಉದ್ಯಮಿ ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಮಾಲಕತ್ವದ ವಫಾ ಎಂಟರ್ ಪ್ರೈಸಸ್'ನ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ "ನ ನೂತನ ಮಳಿಗೆಯು ಸ್ವಾತಂತ್ರ್ಯ ದಿನವಾದ ಇಂದು(ಆ.15) ಸಂಜೆ 4 ಗಂಟೆಗೆ ಸುರತ್ಕಲ್‌ನ ಕೃಷ್ಣಾಪುರದಲ್ಲಿರುವ ಎಚ್‌ಎನ್ ಜಿಸಿ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಮಂಗಳೂರು, ಉಡುಪಿ ಭಾಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಚಿನ್ನದ ಮಳಿಗೆ ನಿರ್ಮಿಸಲಾಗಿದ್ದು, ಮಳಿಗೆ ಶುಭಾರಂಭ ಸುಸಂದರ್ಭದ ದಿನದಿಂದಲೇ ಹಲವು ಆಫರ್'ಗಳನ್ನು ನೀಡಲಾಗಿದೆ. ಸ್ವರ್ಣ ಪ್ರಿಯರನ್ನು ಆಕರ್ಷಿಸುವ ರೀತಿಯಲ್ಲಿ ವಿನೂತನವಾಗಿ ರೂಪುಗೊಂಡಿರುವ ವಿಶಾಲವಾದ ನೂತನ ಮಳಿಗೆಯು ಶುಕ್ರವಾರದಿಂದ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಮತ್ತು ಹಬ್ಬದಿನಗಳಲ್ಲಿ ಚಿನ್ನುಭರಣ ಧರಿಸಲು ವಿಶಿಷ್ಟ ವಿನ್ಯಾಸದ ಅಭರಣ, ಡೈಮೆಂಡ್ ಗಳು ಲಭ್ಯವಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಚಿನ್ನ ಮಾರಾಟ ಸೇರಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.
ಶುಭಾರಂಭ ಸಮಾರಂಭದಲ್ಲಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಕೋಸ್ಟಲ್ ವುಡ್ ಜನಪ್ರಿಯ ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ರಾಜೀವ ಗಾಂಧಿ ಯೂನಿವರ್ಸಿಟಿಯ ಹೆಲ್ತ್ ಸೈನ್ಸ್ ನ ಸದಸ್ಯ ಯು.ಟಿ. ಇಫ್ತಿಕಾರ್, ಸ್ಥಳೀಯ ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು, ಇತರ ಗಣ್ಯರು ಭಾಗವಹಿಸಲಿದ್ದಾರೆ.

