
ಸುರತ್ಕಲ್‌ನ ಕೃಷ್ಣಾಪುರದಲ್ಲಿ ಶುಭಾರಂಭಗೊಂಡ ಅಬ್ದುಲ್ ವಹ್ಹಾಬ್ ಕುಳಾಯಿ ಮಾಲಕತ್ವದ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್"ನ ನೂತನ ಮಳಿಗೆ
ತನ್ನ ಅಮೃತಾಹಸ್ತದಿಂದ ನೂತನ ಮಳಿಗೆ ಉದ್ಘಾಟಿಸಿದ ಅಬ್ದುಲ್ ವಹ್ಹಾಬರ ತಾಯಿ !
ಶುಭಾರಂಭದ ಆರಂಭದಲ್ಲಿಯೇ ಇಬ್ಬರು ಅದೃಷ್ಟಶಾಲಿಗಳಿಗೆ ಒಲಿಯಿತು ಚಿನ್ನದ ಉಂಗುರ !
ಸುರತ್ಕಲ್: ಕರ್ನಾಟಕ ಹಾಗು ಕೇರಳದಲ್ಲಿ ಗ್ರಾಹಕರರೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಉದ್ಯಮಿ ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಮಾಲಕತ್ವದ 'ವಫಾ ಎಂಟರ್ ಪ್ರೈಸಸ್'ನ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ "ನ ನೂತನ ಮಳಿಗೆಯು ಶುಕ್ರವಾರ ಸುರತ್ಕಲ್‌ನ ಕೃಷ್ಣಾಪುರದಲ್ಲಿರುವ ಎಚ್‌ಎನ್ ಜಿಸಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಕನಸಿನ ಯೋಜನೆ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್"ನ ನೂತನ ಮಳಿಗೆಯನ್ನು ಅವರ ತಾಯಿ ಮೈಮೂನರವರ ಅಮೃತಾಹಸ್ತದಿಂದ ಉದ್ಘಾಟಿಸಲಾಯಿತು.
ಪೀಠೋಪಕರಣಗಳು ಮತ್ತು ವಾಣಿಜ್ಯ-ವಸತಿ ಸಮುಚ್ಚಯಗಳ ನಿರ್ಮಾಣದಲ್ಲಿ ಅಂತರ್ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ಅಬ್ದುಲ್ ವಹ್ಹಾಬ್ ಕುಳಾಯಿ ಅವರ 'ವಫಾ ಎಂಟರ್ ಪೈಸಸ್'ನ ಈ ನೂತನ ಮಳಿಗೆಯ ಶುಭಾರಂಭದ ಮೂಲಕ 'ವಫಾ' ಚಿನ್ನಾಭರಣಗಳ ಉದ್ಯಮಕ್ಕೂ ಕಾಲಿಟ್ಟಂತಾಗಿದೆ.
ಕೃಷ್ಣಾಪುರ ಸಂಯುಕ್ತ ಖಾಝಿ ಇ.ಕೆ.ಇಬ್ರಾಹೀಂ ಮದನಿ ಆರಂಭದಲ್ಲಿ ದುವಾ ನೆರವೇರಿಸಿ, ಶುಭ ಹಾರೈಸಿದರು.
'ವಫಾ'ದಿಂದ ಗ್ರಾಹಕರಿಗೆ ಲಾಭವೇ ಹೊರತು ನಷ್ಟವಿಲ್ಲ: ಅರವಿಂದ್ ಬೋಳಾರ್
ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೋಸ್ಟಲ್ ವುಡ್ ಜನಪ್ರೀಯ ಹಾಸ್ಯ ಕಲಾವಿದ 'ತುಳುನಾಡ ಮಾಣಿಕ್ಯ' ಅರವಿಂದ್ ಬೋಳಾರ್, "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್"ನ ಮೂರು ಸ್ಕೀಮ್'ಗಳನ್ನೂ ಇಂದು ಶುಭಾರಂಭದ ವೇಳೆ ಅನಾವರಣಗೊಳಿಸಲಾಯಿತು. ಇದು ಗ್ರಾಹಕರಿಗೆ ಹೇಳಿ ಮಾಡಿಸಿದಂತಹ ಸ್ಕೀಮ್. 'ವಫಾ' ಸಂಸ್ಥೆ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಎಲ್ಲವೂ ವೇಗಗತಿಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ವಫಾದ ಓರ್ವ ಸದಸ್ಯ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಪ್ರತಿಯೊಬ್ಬರೂ ವಫಾ ಸಂಸ್ಥೆಯ ಸದಸ್ಯರಾಗಬೇಕು. ಇದರಿಂದ ನಮಗೆ ಲಾಭವಿದೆಯೇ ಹೊರತು ನಷ್ಟವಿಲ್ಲ. ವಫಾ ಫರ್ನಿಚರ್ ಆಗಲಿ, ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಗಲಿ ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಉದ್ಯಮಗಳಲ್ಲೂ ಗುಣಮಟ್ಟ, ಬದ್ಧತೆಯನ್ನು ಕಾಪಾಡಿಕೊಂಡು ಬಂದಿರುವ 'ವಫಾ': ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್
ಇನ್ನೋರ್ವ ಮುಖ್ಯ ಅತಿಥಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್ ಮಾತನಾಡಿ, ವಫಾ ತನ್ನ ಎಲ್ಲಾ ಉದ್ಯಮಗಳಲ್ಲೂ ಗುಣಮಟ್ಟ ಮತ್ತು ಬದ್ಧತೆಯನ್ನು ಕಾಪಾಡಿಕೊಂಡು ಬಂದಿರುವ ಕಾರಣದಿಂದಲೇ ಇಂದು ಈ ಮಟ್ಟಕೆ ಬೆಳೆದು ನಿಂತಿದೆ. ಉತ್ತಮ ಸೇವೆ ನೀಡುತ್ತಿರುವ ವಫಾ ಜೊತೆ ನಾವೆಲ್ಲಾ ಕೈಜೋಡಿಸಬೇಕಿದೆ ಎಂದರು.
ಸಾಮಾಜಿಕ ಕಾರ್ಯಗಳಲ್ಲಿಯೂ 'ವಫಾ' ಮುಂದಿದೆ: ಅಶ್ರಪ್ ಕೆ.
ಉದ್ಯಮಗಳ ಜೊತೆಗೆ ಬಡವರು, ಬಡ ಹೆಣ್ಣುಮಕ್ಕಳ ಮದುವೆ, ಆರೋಗ್ಯ, ಸಾಮಾಜಿಕ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ವಫಾ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇದೊಂದು ಉದ್ಯಮವಾಗಿರದೆ ಸಮಾಜಮುಖಿ ಆಗಿ ಸೇವೆ ಸಲ್ಲಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಮಾಜಿ ಮೇಯರ್ ಅಶ್ರಪ್ ಕೆ.ಮೆಚ್ಚುಗೆ ವ್ಯಕ್ತಪಸಿದರು.
ಗ್ರಾಹಕರಿಗಾಗಿ ವಿಶೇಷ ಸ್ಕೀಮ್'ನ ಪೋಸ್ಟರ್ ಬಿಡುಗಡೆ
ಈ ಸಂದರ್ಭದಲ್ಲಿ "ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್"ನ 'ಸ್ವರ್ಣ ಹನಿ' 'ಅಡ್ವಾನ್ಸ್ ಗೋಲ್ಡ್', 'ಸ್ವರ್ಣ ಬಂಧ' ಎಂಬ ವಿಶೇಷ ಸ್ಕೀಮ್ ಪೋಸ್ಟರ್ ಅನ್ನು ಅತಿಥಿಗಳು ಅನಾವರಣಗೊಳಿಸಿದರು.
'ವಿಸಿಟ್ ಆ್ಯಂಡ್ ವಿನ್ ' ವಿನೂತನ ಸ್ಪರ್ಧೆಯಲ್ಲಿ ಚಿನ್ನ ಪಡೆದ ಅದೃಷ್ಟಶಾಲಿಗಳು
ಮಳಿಗೆ ಶುಭಾರಂಭದ ಹಿನ್ನೆಲೆಯಲ್ಲಿ 'ವಿಸಿಟ್ ಆ್ಯಂಡ್ ವಿನ್ ' ಎಂಬ ವಿನೂತನ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದು ಕೊನೆಯತನಕ ಇದ್ದ ಇಬ್ಬರು ಅದೃಷ್ಟಶಾಲಿಗಳಿಗೆ ಲಕ್ಕಿ ಡ್ರಾ ಮೂಲಕ ಚಿನ್ನದ ಉಡುಗೊರೆಯನ್ನು ನೀಡಲಾಯಿತು. ಅದೃಷ್ಟಶಾಲಿಗಳಾದ ಜಲೀಲ್ ಮುಂಚೂರ್ ಹಾಗು ಅಸ್ನಾ ಕೃಷ್ಣಾಪುರ ಅವರಿಗೆ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಸುಪುತ್ರಿ ವಫಾ ಅವರು ಚಿನ್ನದ ಉಂಗುರವನ್ನು ನೀಡಿ ಅಭಿನಂದಿಸಿದರು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜೋಕಟ್ಟೆಯ ಅಂಜುಮಾನ್ ಇಂಗ್ಲಿಷ್ ಮೀಡಿಯಂ ಸ್ಕೂಲ್'ನ ಚೇರ್ಮೆನ್ ಸುಲೈಮಾನ್ ಜೋಕಟ್ಟೆ, ಸಾಮಾಜಿಕ ಕಾರ್ಯಕರ್ತ ಫಾರೂಕ್ ಚಂದ್ರನಗರ, ಉದ್ಯಮಿ ರಜಬ್ ಪರ್ಕಳ, ರೋಟರಿ ಕ್ಲಬ್ ಅಧ್ಯಕ್ಷೆ ತಸ್ಲಿಯಾ ಅರಾ, ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ಹಾಜರಿದ್ದರು.
ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್, ಇನಾಯತ್ ಅಲಿ, ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ಅವರ ಪುತ್ರಿ ವಫಾ, ಮ್ಯಾನೇಜರ್ ಅಬ್ದುಲ್ ಖಾದರ್, ಮಾಧ್ಯಮ ವಕ್ತಾರ ಜುನೈದ್ ಉಚ್ಚಿಲ, ಅಬೂಬಕ್ಕರ್ ಕುಳಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಫಾ ಎಂಟರ್ ಪ್ರೈಸಸ್'ನ ನಿರೂಪಕ ರಫೀಝ್ ಮೂಡಬಿದ್ರೆ ಸ್ವಾಗತಿಸಿದರು. ನೌಫಾಲ್ ವಿಟ್ಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.