'ಉಡುಪಿ ಉಚ್ಚಿಲ ದಸರಾ'ದಲ್ಲಿ ಮುದ್ದು ಶಾರದೆಯರ ಕಲರವ; ಆಕರ್ಷಣೀಯವಾಗಿ ಮೂಡಿಬಂದ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ
Photo: Sachin Uchila
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಶುಕ್ರವಾರ ಮುದ್ದು ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಶಾರದಾ ದೇವಿಯ ಛದ್ಮವೇಷ ಸ್ಪರ್ಧೆ ಆಕರ್ಷಕವಾಗಿ ಮೂಡಿಬಂತು.
ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 3 ವರ್ಷದಿಂದ 9 ವರ್ಷಗಳ ವಯೋಮಿತಿಯ 70 ಮಂದಿ ಮಕ್ಕಳು ಭಾಗವಹಿಸಿದ್ದರು. ಪುಟಾಣಿ ಮಕ್ಕಳು ಶಾರದಾ ದೇವಿಯ ವಿವಿಧ ವೇಷ ಭೂಷಣಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೆರೆದವರ ಗಮನ ಸೆಳೆದರು.
ಛದ್ಮವೇಷ ಸ್ಪರ್ಧೆಯ ವಿಜೇತರು
ಛದ್ಮವೇಷ ಸ್ಪರ್ಧೆಯಲ್ಲಿ ಅನ್ವಿ ಎಸ್. ನಾಯಕ್ ಬ್ರಹ್ಮಾವರ ಪ್ರಥಮ ಸ್ಥಾನವನ್ನು, ದ್ವಿತೀಯ ಸ್ಥಾನವನ್ನು ವಿಶ ಎಸ್.ಪೂಜಾರಿ ಕಾರ್ಕಳ ಹಾಗು ಆಧ್ಯ ಕಲ್ಯ ತೃತೀಯ ಸ್ಥಾನವನ್ನು ಪಡೆದರು.
ವಿಜೇತ ಮಕ್ಕಳಿಗೆ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಬಹುಮಾನವನ್ನು ನೀಡಿ ಅಭಿನಂದಿಸಿದರು.
ಛದ್ಮವೇಷ ಸ್ಪರ್ಧೆಗೆ ತೀರ್ಪುಗಾರರಾಗಿ ಸಹಕರಿಸಿದ ನೃತ್ಯಗಾರ್ತಿ ರಶ್ಮಿ ಸರಳಾಯ, ದೀಪ್ತಿ ಶ್ರೀ ಜೋಗಿ ಹಾಗು ಶ್ರದ್ಧಾ ಅಶ್ವಿನ್ ಪ್ರಭು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.




