ಚೊಕ್ಕಬೆಟ್ಟು ಜಾಮಿಯಾ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಮಂಗಳೂರು ಉತ್ತರ ವಲಯ ಪ್ರಾಥಮಿಕ-ಪ್ರೌಢಶಾಲಾ ತ್ರೋಬಾಲ್ ಪಂದ್ಯಾಟ ಉದ್ಘಾಟನೆ

ಚೊಕ್ಕಬೆಟ್ಟು ಜಾಮಿಯಾ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಮಂಗಳೂರು ಉತ್ತರ ವಲಯ ಪ್ರಾಥಮಿಕ-ಪ್ರೌಢಶಾಲಾ ತ್ರೋಬಾಲ್ ಪಂದ್ಯಾಟ ಉದ್ಘಾಟನೆ

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ  ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ತ್ರೋಬಾಲ್ ಪಂದ್ಯಾಟವು ಚೊಕ್ಕಬೆಟ್ಟು ಜಾಮಿಯಾ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಡೆಯಿತು. 

ಕಾರ್ಯಕ್ರಮದ  ಉದ್ಘಾಟನೆಯನ್ನು ಮಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಭರತ್ ಅವರು ಬಲೂನನ್ನು ಹಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. 

ಸಭೆಯ ಅಧ್ಯಕ್ಷತೆಯನ್ನು ಜಾಮಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಸಂಶುದ್ದೀನ್ ಐ.ಎಚ್.ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಜನಾಬ್ ಸಿಕಂದರ್ ಅವರು ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. 

ಸಭೆಯಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ  ವಿನೋದ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿತಿನ್ ಪುತ್ರನ್, ಶಾಲಾ ಪ್ರಾಂಶುಪಾಲರಾದ ಜನಾಬ್ ಅಬೂಬಕ್ಕರ್ ಐ.ಯು., ಮುಖ್ಯೋಪಾಧ್ಯಾಯನಿಯಾದ ಪರಮೇಶ್ವರಿ, ಕಾರ್ಯದರ್ಶಿ ಜನಾಬ್ ನವಾಝ್ , ಜೊತೆ ಕಾರ್ಯದರ್ಶಿ  ಮಾಲಿಕುದ್ದೀನ್, ಕೋಶಾಧಿಕಾರಿ ಬಾವುನ್ನಿ ಮೊಹಮ್ಮದ್, ಸದಸ್ಯರಾದ ನಜೀರ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಅಬೂಬಕರ್ ಐ.ಯು. ಸ್ವಾಗತಿಸಿ, ಅಕ್ಷತಾರವರು ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಸುರೇಖಾ ನಡೆಸಿಕೊಟ್ಟರು.

Ads on article

Advertise in articles 1

advertising articles 2

Advertise under the article