ಮದ್ದೂರು ಗಣೇಶ ವಿಸರ್ಜನಾ ವೇಳೆ ಗಲಾಟೆಯಲ್ಲಿ ಲಾಠಿ ಏಟು ತಿಂದು ಮಿಂಚಿದ್ದ ಜ್ಯೋತಿ ವಿರುದ್ಧ ಎಫ್ಐಆರ್
Thursday, September 11, 2025
ಮಂಡ್ಯ: ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ ಸಂಘಪರಿವಾರದ ಕಾರ್ತಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಜ್ಯೋತಿ ಎನ್ನುವ ಯುವತಿಗೂ ಸಹ ಲಾಠಿ ಏಟು ಬಿದ್ದಿದ್ದು, ಆಕೆ ಪೊಲೀಸರಿಗೆ ಇಡೀ ಶಾಪ ಹಾಕಿದ್ದಳು. ಅಲ್ಲದೇ ಸಿಎಂ ಸಿದ್ದರಾಮಯ್ಯಗೆ ಬೈದಿದ್ದಳು. ಸದ್ಯ ಜ್ಯೋತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಲ್ಲದೇ ಈಕೆಯೆ ರೀಲ್ಸ್ ಗಳು ಸಹ ವೈರಲ್ ಆಗಿವೆ. ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿಎಂ ಹಾಗೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮದ್ದೂರು ಠಾಣೆ ಪಿಐ ಶಿವಕುಮಾರ್ ದೂರು ಆಧರಿಸಿ ಮದ್ದೂರಿನ ಶಿವಪುರ ನಿವಾಸಿ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನ್ಯಧರ್ಮದ ಬಗ್ಗೆ ಧಕ್ಕೆಯಾಗುವ ಪದ ಬಳಕೆ, ಕೋಮುಗಳ ನಡುವೆ ಪರಸ್ಪರ ವೈಮನಸ್ಸು ಉಂಟು ಮಾಡುವ ಹೇಳಿಕೆ, ವೈರತ್ವ ಉತ್ತೇಜನ ನೀಡುವ ಆರೋಪದಡಿ ಪ್ರಕರಣ ದಾಖಲಾಗಿದೆ.