ಅಬುಧಾಬಿಯಲ್ಲಿ ನಡೆದ ಕೆಸಿಎಫ್ ಅಬುಧಾಬಿ ಗ್ರ್ಯಾಂಡ್ ಮೀಲಾದ್ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ

ಅಬುಧಾಬಿಯಲ್ಲಿ ನಡೆದ ಕೆಸಿಎಫ್ ಅಬುಧಾಬಿ ಗ್ರ್ಯಾಂಡ್ ಮೀಲಾದ್ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಬುಧಾಬಿ ಘಟಕದ ಆಶ್ರಯದಲ್ಲಿ ಗ್ರ್ಯಾಂಡ್ ಮೀಲಾದ್ ಸಮ್ಮೇಳನ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್‌ನಲ್ಲಿ ವೈಭವದಿಂದ ನೆರವೇರಿತು.

ಮೌಲಿದ್–ಬುರ್ದಾ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಸಮ್ಮೇಳನ ಉದ್ಘಾಟಿಸಿದರು. 








ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಪ್ರಮುಖ ಪ್ರಭಾಷಣಗೈದರು. ಅವರು ಪ್ರವಾದಿ ಮಹಮ್ಮದ್ (ಸ.ಅ) ಅವರ ಮಾನವೀಯತೆ ಮತ್ತು ಸೌಹಾರ್ದತೆಯ ಕುರಿತು ವಿಸ್ತೃತವಾಗಿ ವಿವರಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ, ಕುಟ್ಟೂರು ಅಬ್ದುಲ್ ರಹ್ಮಾನ್ ಹಾಜಿ (ಬನಿಯಾಸ್ ಸ್ಪೈಕ್), ಸುಲೈಮಾನ್ ಹಾಜಿ, ನಿಯಾಝ್ ಪ್ರೈಮ್ ಗ್ಲೋಬಲ್, ಇಬ್ರಾಹಿಂ ಹಾಜಿ ಬ್ರೈಟ್, ಮೀಲಾದ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಅಲಿ ಹಾಜಿ, ಪಿ.ಎಂ. ಹೆಚ್. ಅಬ್ದುಲ್ ಹಮೀದ್, ಬಶೀರ್ ಕಿನ್ನಿಂಗಾರ್, ಹಮೀದ್ ಪೆರುವಾಯಿ, ಹಕೀಂ ತುರ್ಕಳಿಕೆ, ಹಸೈನಾರ್ ಅಮಾನಿ, ಐಸಿಎಫ್., ಆರ್.ಎಸ್.ಸಿ.  ಸಂಘಟನೆಗಳ ನೇತಾರರು ಹಾಗೂ ಅನೇಕ ಸಮಾಜ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತ್ವೈಬಾ ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಆಲಾಪಿಸಿದರು. ಮುಖ್ಯ ಅತಿಥಿಗಳಿಗೆ ಅಬುಧಾಬಿ ಮೀಲಾದ್ ಸಮಿತಿಯು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. 

ಕೆಸಿಎಫ್ ಅಬುಧಾಬಿ ಅಧ್ಯಕ್ಷ ಕಬೀರ್ ಬಾಯಂಬಾಡಿ ಸ್ವಾಗತ ಭಾಷಣ ಮಾಡಿದರು. ಸ್ವಾಗತ ಸಮಿತಿ ಜನರಲ್ ಕನ್ವೀನರ್ ಉಮರ್ ಈಶ್ವರಮಂಗಲ ವಂದನೆ ಸಲ್ಲಿಸಿದರು.

Ads on article

Advertise in articles 1

advertising articles 2

Advertise under the article